ದೇಶ

ದೀಪಾವಳಿಗೆ ಕೋಟ್ಯಂತರ ಬಳಕೆದಾರರಿಗೆ ಜಿಯೋದಿಂದ ಭರ್ಜರಿ ಗಿಫ್ಟ್​..! ಸಂಪೂರ್ಣ ಫ್ರೀ ಫ್ರೀ ಫ್ರೀ..!

ಬೆಳಕಿನ ಹಬ್ಬ ದೀಪಾವಳಿಗೆ ಮುಕೇಶ್ ಅಂಬಾನಿ ಒಡೆತದ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಶೇರುದಾರರು, ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಭರ್ಜರಿ ಗಿಫ್ಟ್‌ಗಳನ್ನು ನೀಡುತ್ತಿದೆ.

ಮುಂಬೈ: ಬೆಳಕಿನ ಹಬ್ಬ ದೀಪಾವಳಿಗೆ ಮುಕೇಶ್ ಅಂಬಾನಿ ಒಡೆತದ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಶೇರುದಾರರು, ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಭರ್ಜರಿ ಗಿಫ್ಟ್‌ಗಳನ್ನು ನೀಡುತ್ತಿದೆ.

ಮ್ಯೂಸಿಕ್-ಸ್ಟ್ರೀಮಿಂಗ್ ಪ್ಲಾಟ್‌ಫಾರಂ ಜಿಯೋ ಸಾವನ್‌ನಿಂದ ಹಬ್ಬಕ್ಕೂ ಮೊದಲೇ ಗಿಫ್ಟ್ ಘೋಷಣೆ ಮಾಡಿದೆ. ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಬಳಕೆದಾರರು ಮೂರು ತಿಂಗಳು  JioSaavn Pro ಸಬ್‌ಸ್ಕ್ರಿಪ್ಷನ್ ಪಡೆದುಕೊಳ್ಳಬಹುದಾಗಿದೆ. ಈ ಉಚಿತ ಸಬ್‌ಸ್ಕ್ರಿಪ್ಷನ್‌ನಿಂದಾಗಿ ಬಳಕೆದಾರರು ಹೈ ಕ್ವಾಲಿಟಿಯಲ್ಲಿ ಅನ್‌ಲಿಮಿಟೆಡ್ ಮ್ಯೂಸಿಕ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ವಿಶೇಷ ಆಫರ್ ಕೇವಲ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ ಎಂದು ಜಿಯೋ ಸಾವನ್ ಮಾಹಿತಿ ನೀಡಿದೆ.