ಅಡಿಲೇಡ್: ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲನುಭವಿಸಿರುವ ಆಸ್ಟ್ರೇಲಿಯಾಗೆ ಗಾಯದ ಸಮಸ್ಯೆ ಕಾಡುತ್ತಿದೆ. ಆಸ್ಟ್ರೇಲಿಯಾದ ಪ್ರಮುಖ ವೇಗಿ ಜೋಶ್ ಹ್ಯಾಜಲ್‌ವುಡ್ ಗಾಯಗೊಂಡು ಅಡಿಲೇಸ್ ಟೆಸ್ಟ್‌ನಿಂದ ಹೊರಬಿದ್ದಿದಾರೆ.
ಅಡಿಲೇಡ್ ನಲ್ಲಿ ಡಿಸೆಂಬರ್ 6 ರಿಂದ ಪಿಂಕ್‌ಬಾಲ್ ಟೆಸ್ಟ್ ಆರಂಭವಾಗಲಿದೆ. ಎರಡನೇ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸುತ್ತಿದ್ದ ಜೋಶ್ ಹ್ಯಾಜಲ್‌ವುಡ್ ಗಾಯಗೊಂಡಿದ್ದು, ಸರಣಿೈ ಎರಡನೇ ಪಂದ್ಯದಿಂದ ಹೊರಬಿದ್ದಿದಾರೆ. ಇನ್ನು ಅಲ್ರೌಂಡರ್ ಮಿಚೆಲ್ ಮಾರ್ಷ್ ಸಹ ಫಿಟ್‌ನೆಸ್ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹ್ಯಾಜಲ್‌ವುಡ್ ಬದಲಿಗೆ ಯುವ ವೇಗಿಗಳಾದ ಸೀನ್ ಅಬಾಟ್ ಮತ್ತು ಬ್ರೆಂಡನ್ ಡಾಗೆಟ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹ್ಯಾಜಲ್‌ವುಡ್ ಬದಲಿಗೆ ಸ್ಕಾಟ್ ಬೊಲ್ಯಾಂಡ್ ದ್ವಿತೀಯ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.
ಮಿಚೆಲ್ ಮಾರ್ಷ್ ಅವರಿಗೆ ಬ್ಯಾಕಪ್ ಆಟಗಾರನಾಗಿ ಆಲ್ರೌಂಡರ್ ಬ್ಯೂ ವೆಬ್ಸ್ಟರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ದ್ವಿತೀಯ ಪಂದ್ಯದ ವೇಳೆ ಮಿಚೆಲ್ ಮಾರ್ಷ್ ಹೊತ್ತಿಗೆ ಸರಿಯಾಗಿ ಚೇತರಿಸದೇ ಹೋದರೆ ಬ್ಯೂ ವೆಬ್ಸ್ಟರ್‌ಗೆ ಆಡುವ 11 ರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.
ಡಿ. 6 ರಿಂದ 10ರವರೆಗೆ ಅಡಿಲೇಡ್ ಓವಲ್ ನಲ್ಲಿ ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆಯಲಿದೆ. ಪರ್ತ್ನಲ್ಲಿ 295 ರನ್ನುಗಳ ಭಾರೀ ಸೋಲನುಭವಿಸಿದ ಆಸ್ಟ್ರೇಲಿಯ ತಂಡ ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.