ವೈರಲ್

ದಿನಸಿ ತರಲು ಹೋದ ಪತ್ರಕರ್ತ ರೈಲಿಗೆ ಸಿಲುಕಿ ಸಾವು, ಮಗನ ಸಾವಿನ ಸುದ್ದಿ ಕೇಳಿ ತಂದೆಯೂ ಸಾವು

ಪತ್ರಕರ್ತ ಹಾಗೂ ಲೇಖಕ ನಾಗೇಶ್​ ಗುಬ್ಬಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು: ತುಮಕೂರಿನಲ್ಲಿ ಪತ್ರಕರ್ತ ಹಾಗೂ ಲೇಖಕ ನಾಗೇಶ್ ಗುಬ್ಬಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಗೇಶ್ ಅವರು ಗುರುವಾರ ಸಂಜೆ ಮನೆಗೆ ದಿನಸಿ ತರಲು ಹೋದಾಗ ರೈಲ್ವೆ ಹಳಿ ದಾಟುವಾಗ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಸಂಜೆ  ಗಾರ್ಡನ್ ರಸ್ತೆಯಲ್ಲಿಯಲ್ಲಿರುವ  ಚಿತಾಗಾರದಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು.

ಇನ್ನು ಹೃದಯ ವಿದ್ರಾವಕ ಘಟನೆ ಏನೆಂದರೆ ಸದ್ಯ  ಮಗ ನಾಗೇಶ್ ಗುಬ್ಬಿ ಸಾವಿನ ಆಘಾತದ ಹಿನ್ನೆಲೆ ಅವರ ತಂದೆಯೂ ಸಾವನಪ್ಪಿದ್ದಾರೆ.