ವೈರಲ್

ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಆರೋಪಿಗಳನ್ನು ಬಿಟ್ಟು ಕಳಿಸಿದ ಜಡ್ಜ್..ಯಾಕೆ ಗೊತ್ತಾ..? ​

ಕೊಲೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿ ತೀರ್ಪು ಕೊಡಬೇಕಿದ್ದ ನ್ಯಾಯಾಧೀಶರೇ, ಆರೋಪಿಗಳನ್ನು ಬಿಟ್ಟು ಕಳಿಸಿದ್ದಾರೆ.

ಕೊಲೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿ ತೀರ್ಪು ಕೊಡಬೇಕಿದ್ದ ನ್ಯಾಯಾಧೀಶರೇ, ಆರೋಪಿಗಳನ್ನು ಬಿಟ್ಟು ಕಳಿಸಿದ್ದಾರೆ. ಇದಕ್ಕೆ ಕಾರಣ ಪೊಲೀಸರು ವಿಚಾರಣೆಗೆ ಹಾಜರಾಗದೇ ವಿಳಂಬ ಮಾಡಿದ್ದು..ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ರಾಮನಗರ ಸಿವಿಲ್‌ ನ್ಯಾಯಾಲಯಕ್ಕೆ, ಪೊಲೀಸರು ರಿಮ್ಯಾಂಡ್‌ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಪೊಲೀಸರು ವಿಳಂಬ ಮಾಡಿದ ಕಾರಣಕ್ಕೆ ಕೋಪಗೊಂಡ ನ್ಯಾಯಾಧೀಶರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಜೈಲಿನಿಂದ ಹೊರಬಂದ ಆರೋಪಿಗಳು ಚಂದು, ಮುರುಳಿ, ನಾಗೇಶ್ ಎನ್ನಲಾಗಿದೆ.

ಅಂದ್ಹಾಗೆ ನವೆಂಬರ್‌ 26ರಂದು, ರಾಮನಗರ ಹೊರವಲಯದಲ್ಲಿ 21 ವರ್ಷದ ಬಿಕಾಂ ವಿದ್ಯಾರ್ಥಿ ಪುನಿತ್ ಕೊಲೆ ಆಗಿತ್ತು. ಅಂದ್ರೆ ಆ ದಿನ ವಿದ್ಯಾರ್ಥಿಗಳು ಬ್ಯಾಚುಲರ್ ಪಾರ್ಟಿಗಾಗಿ ರಾಮನಗರ ಹೊರವಲಯದಲ್ಲಿನ ರೆಸಾರ್ಟ್ಗೆಬಂದಿದ್ದರು. ವೇಳೆ ರೆಸಾರ್ಟ್ ಒಳಗೆ ಮೂವರು ಆರೋಪಿಗಳು ನುಗ್ಗಿದ್ದರು. 1 ಚಂದು ಎಂಬುವನು ಪುನೀತ್ ಮೇಲೆ ಹಲ್ಲೆಮಾಡಿದ್ದನು. ಬಳಿಕ ಮೂವರು ಸೇರಿಕೊಂಡು ಪುನಿತ್ ಮೇಲೆ ಹಲ್ಲೆಮಾಡಿ ಕೊಲೆ ಮಾಡಿದ್ದರು. ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೇ ಪ್ರಕರಣದಲ್ಲಿ ಮೂವರು ಆರೋಪಿಗಳು ಅಂದರ್‌ ಆಗಿದ್ದರು, ಆದರೆ ಪೊಲೀಸರು ರಿಮ್ಯಾಂಡ್‌ ಅರ್ಜಿ ಸಲ್ಲಿಸಲು ತಡವಾದ್ದರಿಂದ ಮೂವರೂ ಹೊರಗೆ ಬಂದಿದ್ದಾರೆ.