ಮಹಾಕುಂಭದಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣದ ನ್ಯಾಯಾಂಗ ತನಿಖೆ ಚುರುಕೊಂಡಿದೆ.. ನಿವೃತ್ತ ನ್ಯಾಯಾಧೀಶ ಹರ್ಷಕುಮಾರ್ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯು ತನಿಖೆ ನಡೆಸುತ್ತಿದ್ದು, ನಿಯೋಗ ಇಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದೆ. ಮೌನಿ ಅಮಾವಾಸ್ಯೆಯಂದು ಮಧ್ಯರಾತ್ರಿ ಉಂಟಾದ ಕಾಲ್ತುಳಿತಕ್ಕೆ ಕಾರಣಗಳು ಏನು ಎಂದು ಕಂಡು ಹಿಡಿಯಲಾಗುತ್ತಿದೆ. ಭೀಕರ ಅವಘಡದಲ್ಲಿ ಕರ್ನಾಟಕದ ಬೆಳಗಾವಿಯ ನಾಲ್ವರು ಸೇರಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ 60ಕ್ಕೂ ಹೆಚ್ಚು ಮಂದಿಗೆ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. ಇಂದು ಘಟನಾ ಸ್ಥಳ ಸಂಗಮ್‌ಘಾಟ್‌ಗೆ ಭೇಟಿ ನೀಡಲಿರುವ ಆಯೋಗ, ಸ್ಥಳೀಯರಿಂದ ಮಾಹಿತಿ ಪಡೆಯಲಿದೆ. ತನಿಖೆಯನ್ನು ಪೂರ್ಣಗೊಳಿಸಲು ಆಯೋಗಕ್ಕೆ ಒಂದು ತಿಂಗಳು ಸಮಯಾವಕಾಶವಿದೆ.