ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅತುಲ್ ಆತ್ಮಹತ್ಯೆ ಕೇಸ್ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಸುದ್ದಿ ಮಾಡುತ್ತಿದೆ. ನ್ಯಾಯ ಬಾಕಿ ಇದೆ ಎಂದಾತನ ಸಾವಿನ ನ್ಯಾಯಕ್ಕಾಗಿ ಕೂಗು ಹೆಚ್ಚಾಗಿದೆ. ಎಕ್ಸ್ ಖಾತೆಯಲ್ಲಿ ಜಸ್ಟಿಸ್ ಫಾರ್ ಅತುಲ್ ಎಂದು ಹಲವರು ಪೋಸ್ಟ್ ಹಾಕಿದ್ದಾರೆ. ಅತುಲ್ ಆಪ್ತರು, ಸ್ನೇಹಿತರು ಸೇರಿ ಹಲವರಿಂದ ಪೋಸ್ಟ್ ಹಾಕಲಾಗಿದೆ. ಅತುಲ್ ಸಾವಿಗೆ ನ್ಯಾಯ ಕೊಡಿಸಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲಾಗಿದೆ. ಸದ್ಯ ಪ್ರಕರಣ ಸಂಬಂಧ ಮಾರತ್ತಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.