ಕಲಬುರಗಿಯ ಸೇಟ್ರಲ್ ಜೈಲ್ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೆ ಇದೆ. ಹಾಗೇನೆ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ಅದೇನಂದ್ರೆ ಕೈದಿಗಳ ಮನ ಪರಿವರ್ತನೆಯ ತಾಣವಾಗಿಬೇಕಾದ ಕೇಂದ್ರ ಕಾರಾಗೃಹ ಕೈದಿಗಳ ಪಾಲಿನ ರೆಸಾಟ್೯ ಆಗಿ ಮಾರ್ಪಟ್ಟಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಜೈಲಿನೊಳಗೆ ಕೈದಿಗಳು ರಾಜಾರೋಷವಾಗಿ ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ವೈರಲ್ ಆಗ್ತಿದೆ. ಮೊಬೈಲ್, ಮದ್ಯ, ಸಿಗರೇಟ್, ಬೀಡಿ, ಗುಟ್ಕಾ, ತಂಬಾಕು ಮುಂತಾದ ನಿಷೇಧಿತ ವಸ್ತುಗಳು ಜೈಲಿನ ಕೈದಿಗಳ ಕೈಗಳಿಗೆ ಸಲೀಸಾಗಿ ಸೇರುತ್ತಿವೆ, ಇದರಿಂದ ಕೈದಿಗಳು ಬಿಂದಾಸ್ ಆಗಿ ಲೈಫ್ ಸ್ಪೆಂಡ್ ಮಾಡ್ತಿದ್ದಾರೆ. ರಾಜಾರೋಷವಾಗಿ ಬೆಲೆ ಬಾಳುವ ಸ್ಮಾರ್ಟ್ ಪೋನ್ ಬಳಸಿಕೊಂಡು ಹೊರಗಿನ ವ್ಯವಹಾರ, ಅಕ್ರಮ ದಂಧೆಗಳನ್ನು ಜೈಲಿನಲ್ಲೇ ಕುಳಿತು ನಿಭಾಯಿಸುತ್ತಿದ್ದಾರಾ.? ಆಗಾದ್ರೆ ಜೈಲಾಧಿಕಾರಿಕಾರಿಗಳು ಅಧಿಕಾರಿಗಳು ಎನ್ ಮಾಡ್ತಿದ್ದಾರೆ ಎಂಬ ಪ್ರಶ್ನೆ ಒಂದು ಕಡೆಯಾದ್ರೆ.
ಜೈಲಿನ ಅಧೀಕ್ಷಕಿ ಡಾ.ಅನಿತಾ ಹಣದ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಮತ್ತೊಂದು ಕಡೆ. ಇನ್ನೊಂದೆಡೆ ಅನಿತಾ ಅವರು ಈ ಜೈಲಿನ ಅಧೀಕ್ಷಕಿಯಾಗಿ ಇಲ್ಲಿಗೆ ಬಂದ ನಂತರದಲ್ಲಿ ಕೈದಿಗಳ ರಾಜಾತಿಥ್ಯಕ್ಕೆ ಬ್ರೇಕ್ ಹಾಕಿದ್ದಾರೆ ಎಂಬ ಪ್ರಶಂಸೆಯ ಮಾತುಗಳು ಸಹ ಕೇಳಿಬರುತ್ತಿವೆ. ಹಾಗಾದ್ರೆ ನಿಜಕ್ಕೂ ಜೈಲಿನಲ್ಲಿ ನಡೆಯುತ್ತಿರುವುದು ಏನು.! ಎಂಬ ಸತ್ಯ ತನಿಖೆಯ ನಂತರವೇ ಬಹಿರಂಗವಾಗಬೇಕಿದೆ.