ಕರ್ನಾಟಕ

ಕಲಬುರಗಿ ನವಜಾತ ಶಿಶು ಅಪಹರಣ ಪ್ರಕರಣ: ಅಮ್ಮನ ಮಡಿಲು ಸೇರಿದ ಕಂದಮ್ಮ

ನಗರದ ಜಿಮ್ಸ್‌ ಆಸ್ಪತ್ರೆಯಲ್ಲಿ ನವಜಾತಶಿಶು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖತರ್ನಾಕ್‌ ಕಳ್ಳಿಯರನ್ನ ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ: ನಗರದ ಜಿಮ್ಸ್‌ ಆಸ್ಪತ್ರೆಯಲ್ಲಿ ನವಜಾತಶಿಶು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖತರ್ನಾಕ್‌ ಕಳ್ಳಿಯರನ್ನ ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. 

ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ ಮಾಡಿ 50,000ಕ್ಕೆ ಮಾರಾಟ ಮಾಡಿದ್ದ ಮೂವರು ಕಳ್ಳಿಯರನ್ನ, ಸಚಿವ ಡಾ. ಶರಣಪ್ರಕಾಶ್ ಪಾಟೀಲ್‌ ಸೂಚನೆ ಮೇರೆಗೆ ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇವಲ 36 ಗಂಟೆಗಳಲ್ಲಿ ಶಿಶುವನ್ನು ಪತ್ತೆ ಮಾಡಿ ಮತ್ತೆ ಅಮ್ಮನ ಮಡಿಲು ಸೇರುವಂತೆ ಮಾಡಿದ್ದಾರೆ.

ಮೂವರು ಕಳ್ಳಿಯರ ಖತರ್ನಾಕ್‌ ಗ್ಯಾಂಗ್‌ ನವಜಾತಶಿಶುವನ್ನು ಮಾರಾಟಕ್ಕಾಗಿ ಕಿಡ್ನ್ಯಾಪ್‌ ಮಾಡಿತ್ತು. ಕಳ್ಳತನದ ಬಳಿಕ ಖೈರುನ್‌ ಎಂಬ ಮಹಿಳೆಗೆ 50 ಸಾವಿರ ರೂ.ಗೆ ಮಗುವನ್ನು ಮಾರಾಟ ಮಾಡಲಾಗಿತ್ತು. ಕಲಬುರಗಿಯ ಎಂಎಸ್‌ಕೆಮಿಲ್ ಬಡಾವಣೆಯಲ್ಲಿ ಉಮೇರಾ, ನಸರೀನ್ ಹಾಗೂ ಫಾತಿಮಾ ಮಕ್ಕಳ ಕಳ್ಳಿಯರನ್ನು ಬಂಧಿಸಲಾಗಿದೆ. ನಂತರ ಮಗುವನ್ನು ರಕ್ಷಿಸಿ ತಾಯಿ ಕಸ್ತೂರಿ ಅವರಿಗೆ ಒಪ್ಪಿಸಲಾಗಿದೆ.

ನವಜಾತ ಶಿಶು ಪತ್ತೆ ಹಚ್ಚಿದ ಎಸಿಪಿ ಭೂತೇಗೌಡ, ಸಿಪಿಗಳಾದ ಸೋಮಲಿಂಗ್ ಕಿರದಳ್ಳಿ ರಾಘವೇಂದ್ರ ಭಜಂತ್ರಿ ತಂಡವನ್ನು ಪೊಲೀಸ್‌ ಆಯುಕ್ತರು ಪ್ರಶಂಸಿಸಿದ್ದಾರೆ. ಸದ್ಯ ಜಿಮ್ಸ್ ಆಸ್ಪತ್ರೆಯ ಎಸ್‌ಎನ್‌ಸಿಯು ಬ್ಲಾಕ್‌ನಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.