ಮಂಡ್ಯ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೂ ಕೆಲವೇ ದಿನಗಳು ಬಾಕಿಯಿದೆ. ಈ ಸಮ್ಮೇಳನವು ಮಂಡ್ಯದಲ್ಲಿ ಡಿಸೆಂಬರ್ 20, 21, 22ರಂದು ನಡೆಯಲಿದೆ. ಈ ಹಿನ್ನೆಲೆ ಇಂದು ಶಾಸಕ ಗಣಿಗ ರವಿ ನೇತೃತ್ವದಲ್ಲಿ ನಡೆದ ಮನೆ ಮನೆಗಳಲ್ಲೂ ಬಾವುಟ ಅಭಿಯಾನಕ್ಕೆಸಚಿವಚಲುವರಾಯಸ್ವಾಮಿ ಚಾಲನೆ ನೀಡಿದ್ರು. ಹಲವು ಮನೆಗಳಿಗೆ ಕರ್ನಾಟಕ ಬಾವುಟವನ್ನ ವಿತರಿಸುವ ಮೂಲಕ ಸಮ್ಮೇಳನದ ಮೊದಲ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದ್ರು.