ದೇಶ

ಅನಂತ ಪದ್ಮನಾಭ ಮಂದಿರಕ್ಕೆ ಮಹಾ ಪ್ರಧಾನ ಅರ್ಚಕರಾಗಿ ಕನ್ನಡಿಗ ನೇಮಕ

ಅತಿ ಸಣ್ಣ ವಯಸ್ಸಿನಲ್ಲಿಯೇ ಮಹಾಪ್ರಧಾನ ಅರ್ಚಕರಾಗಿ ಪದ್ಮನಾಭನಿಗೆ ಪೂಜೆ ಸಲ್ಲಿಸುವ ಸೌಭಾಗ್ಯ ಸತ್ಯನಾರಾಯಣ ಅವರಿಗೆ ದೊರಕಿರುವುದು ಕನ್ನಡಿಗರಿಗೆ ಸಂತಸವನ್ನ ತಂದಿದೆ.

ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಲಯದ ದೇವಾಲಯಕ್ಕೆ ಪ್ರಧಾನ ಅರ್ಚಕರಾಗಿ ಕನ್ನಡಿಗರೊಬ್ಬರು ನೇಮಕಗೊಂಡಿದ್ದಾರೆ. ಪದ್ಮನಾಭನ ಮಂದಿರಕ್ಕೆ ದೇಗುಲಕ್ಕೆ ಮಹಾ ಪ್ರಧಾನ ಅರ್ಚಕರಾಗಿ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ (45) ನೇಮಕಗೊಂಡಿದ್ದಾರೆ.

ಕೊಕ್ಕಡದ ದಿ.ಸುಬ್ರಾಯ ತೋಡ್ತಿ ಲ್ಲಾಯ ಹಾಗೂ ಶಾರದ ದಂಪತಿ ಎರಡನೇ ಪುತ್ರರಾದ ಬಡೆಕ್ಕರ ಸತ್ಯನಾರಾಯಣ ತೋಡ್ತಿಲ್ಲಾಯ ಅವರು, ತೋಡ್ತಿಲ್ಲಾಯರು ಆರು ತಿಂಗಳ ಹಿಂದೆ ಇಲ್ಲಿಗೆ ಪ್ರಧಾನ ಅರ್ಚಕರಾಗಿ ನೇರವಾಗಿ ಆಯ್ಕೆಯಾಗಿದ್ದರು. ಇದಾದ ಕೇವರ ಆರು ತಿಂಗಳಲ್ಲೇ ಮದ್ಮನಾಭ ದೇಗುಲದ ಮಹಾ ಪ್ರಧಾನ ಅರ್ಚಕರಾಗಿ ನೇಮಕಗೊಂಡಿದ್ದಾರೆ. ಅತಿ ಸಣ್ಣ ವಯಸ್ಸಿನಲ್ಲಿಯೇ ಮಹಾಪ್ರಧಾನ ಅರ್ಚಕರಾಗಿ ಪದ್ಮನಾಭನಿಗೆ ಪೂಜೆ ಸಲ್ಲಿಸುವ ಸೌಭಾಗ್ಯ ಸತ್ಯನಾರಾಯಣ ಅವರಿಗೆ ದೊರಕಿರುವುದು ಕನ್ನಡಿಗರಿಗೆ ಸಂತಸವನ್ನ ತಂದಿದೆ.