ದೇಶ

ಮಹಾಕುಂಭದಲ್ಲಿ ಕನ್ನಡಿಗರು ಮಿಸ್ಸಿಂಗ್‌.. ಕುಟುಂಬಸ್ಥರಲ್ಲಿ ಆತಂಕ..!

ಪ್ರಯಾಗ್‌ರಾಜ್‌ಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಕರ್ನಾಟಕದವರು ಆದಷ್ಟು ಬೇರೆ ಸಮಯದಲ್ಲಿ ಬನ್ನಿ ಎಂದು ಕನ್ನಡಿಗರು ಮನವಿ ಮಾಡಿದ್ದಾರೆ. ನಿನ್ನೆ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಚಿಕ್ಕಬಳ್ಳಾಪುರದ ನಾಲ್ವರು ಸೇರಿ ನೆಲಮಂಗಲದ ಓರ್ವ ಪಾರಾಗಿದ್ದಾರೆ.

ಮೌನಿ ಅಮಾವಾಸ್ಯೆಯಂದೇ ಪ್ರಯಾಗ್‌ರಾಜ್‌ ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಿಂದ ಸಾವಿರಾರು ಮಂದಿ ಅಮೃತಸ್ನಾನಕ್ಕಾಗಿ ತೆರಳಿದ್ದಾರೆ. ಇಂದು ತ್ರಿವೇಣಿ ಸಂಗಮದ ಸಂಗಮ್‌ ಘಾಟ್‌ನಲ್ಲಿ ಮಿಂದೇಳಲು ಕನ್ನಡಿಗರೂ ತೆರಳಿದ್ದರು. ಆದ್ರೆ ಏಕಾಏಕಿ ಉಂಟಾದ ಕಾಲ್ತುಳಿತದಲ್ಲಿ ರಾಜ್ಯದ ಹಲವು ಭಕ್ತರಿಗೆ ಗಾಯವಾಗಿ ಆಸ್ಪತ್ರೆ ಪಾಲಾಗಿದ್ದಾರೆ. ಅದರಲ್ಲಿಯೂ ಬೆಳಗಾವಿಯ ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ತೆರಳಿದ್ದವರಿಗೆ ಹಾಸ್ಪಿಟಲ್‌ನಲ್ಲಿ ಮತ್ತೊಂದು ರೀತಿಯ ನರಕ ದರ್ಶನವೇ ಆಗಿದೆ. ಗಾಯಗೊಂಡು ಬಂದವರಿಗೆ ಸೂಕ್ತ ರೀತಿಯ ಚಿಕಿತ್ಸೆ ಸಿಗ್ತಿಲ್ಲ ಎಂದು ಆರೋಪಿಸಲಾಗಿದೆ. ಪ್ರಯಾಗ್‌ರಾಜ್‌ಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಕರ್ನಾಟಕದವರು ಆದಷ್ಟು ಬೇರೆ ಸಮಯದಲ್ಲಿ ಬನ್ನಿ ಎಂದು ಕನ್ನಡಿಗರು ಮನವಿ ಮಾಡಿದ್ದಾರೆ. ನಿನ್ನೆ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಚಿಕ್ಕಬಳ್ಳಾಪುರದ ನಾಲ್ವರು ಸೇರಿ ನೆಲಮಂಗಲದ ಓರ್ವ ಪಾರಾಗಿದ್ದಾರೆ.