ವೈರಲ್

ದಕ್ಷಿಣ ಕಾಶಿಯಲ್ಲಿ ಕಪಿಲಾರತಿ..ಕಣ್ತುಂಬಿಕೊಂಡ ಭಕ್ತಗಣ..!

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾದ ಮೈಸೂರು ಜಿಲ್ಲೆ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ, ಅದ್ದೂರಿ ಕಪಿಲಾರತಿ ನಡೆದಿದೆ.

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾದ ಮೈಸೂರು ಜಿಲ್ಲೆ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ, ಅದ್ದೂರಿ ಕಪಿಲಾರತಿ ನಡೆದಿದೆ. ಉತ್ತರ ಭಾರತದ ಗಂಗಾ ನದಿಯಲ್ಲಿ ಆಚರಿಸುವ ಗಂಗಾರತಿ ಮಾದರಿಯಲ್ಲಿ ಕಪಿಲಾರತಿ ನಡೆದಿದೆ. ನದಿ  ಮಧ್ಯ ಭಾಗದಲ್ಲಿ ಕಪಿಲಾ ಆರತಿಗಾಗಿ, ಭವ್ಯ ವೇದಿಕೆ ನಿರ್ಮಾಣ ಮಾಡಿ ಭುವನೇಶ್ವರಿ ಪ್ರತಿಷ್ಠಾಪಿಸಿ, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಜ್ಯೋತಿ ಬೆಳಗುವ ಮೂಲಕ ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮಿಗಳು ಹಾಗೂ ಸಾಲೂರು ಮಠದ ಡಾ. ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಮೂಡಗೂರು ವಿರಕ್ತಮಠದ ಶ್ರೀ ಇಮ್ಮಡಿ ಉದ್ದಾನ ಸ್ವಾಮಿಗಳು ಚಾಲನೆ ನೀಡಿದರು. ಬಳಿಕ ವೇದ ಘೋಷದೊಂದಿಗೆ ಭಾರತ ದೇಶದ ಹಲವಾರು ಪುಣ್ಯ ನದಿಗಳ ಹೆಸರಿನಲ್ಲಿ ಧೋಪ, ದೀಪ, ಆರತಿ ನಡೆಯಿತು. ನೆರೆದಿದ್ದ ಭಕ್ತರು ಕಪಿಲಾರತಿಯನ್ನು ಕಣ್ತುಂಬಿಕೊಂಡರು.