ಮೈಸೂರು : ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಶುಂಠಿ ಶುದ್ಧೀಕರಣ ಕೇಂದ್ರಗಳು ರಾಸಾಯನಿಕ ಬಳಸುತ್ತಿರುವುದರಿಂದ ಕಬಿನಿ ಜಲಾಶಯ ಕಲುಷಿತಗೊಳ್ಳುತ್ತಿದೆ. ಇದರ ಪರಿಣಾಮ ಜನ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಯಾವುದೇ ಅನುಮತಿ ಪಡೆಯದೇ ಐದಕ್ಕೂ ಹೆಚ್ಚು ಶುಂಠಿ ಶುದ್ಧೀಕರಣ ಕೇಂದ್ರಗಳು ಸರ್ಕಾರದ ಯಾವುದೇ ಅನುಮತಿ ಪಡೆಯದೇ ಮುನೀರ್ ಹಾಗೂ ಜೋಬಿ ಎಂಬುವವರು ನಡೆಸುತ್ತಿದ್ದಾರೆಂದು ಇಲ್ಲಿನ ಜನರಿಂದ ಆರೋಪಿಸಲಾಗಿದೆ.
ಶುಂಠಿ ತೊಳೆದ ನೀರಿನಿಂದ ದನ ಕರುಗಳ ಮೈಮೇಲೆ ಗಂಟು ಬರ್ತಿವೆ. ಕೆಲ ಹಸುಗಳು ಸತ್ತು ಹೋಗಿವೆ. ಸಣ್ಣ ಪೆಟ್ಟಿಗೆ ಅಂಗಡಿ ತೆರೆದರೂ ಅನುಮತಿಬೇಕು. ಆದರೆ ತಾರಕ ಡ್ಯಾಂ, ಕಬಿನಿ ಡ್ಯಾಂಗೆ ಕಲುಷಿತ ನೀರು ಸೇರಿಸಿದರು ಯಾರೂ ಕೇಳ್ತಿಲ್ಲ. ಈ ಕುಡಿಯುವ ನೀರನ್ನ ಮೈಸೂರು, ಬೆಂಗಳೂರು ಜನರೂ ಕುಡಿಯುತ್ತಾರೆ. ಕೂಡಲೇ ಎಲ್ಲವನ್ನೂ ಬಂದ್ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಎಲ್ಲಾ ಶುಂಠಿ ಕೇಂದ್ರಗಳನ್ನ ಮುಚ್ಚಿಸಬೇಕೆಂದು ಒತ್ತಾಯಿಸಿ ಪರಿಸರ ಇಲಾಖೆ, ಮಾಲಿನ್ಯ ಮಂಡಳಿ, ಪರಿಸರ ಅಭಿಯಂತರರು, ಅರಣ್ಯ ಇಲಾಖೆ, ಜಲಮಂಡಳಿ, ಚೆಸ್ಕಾಂ, ಕಾರ್ಮಿಕ ಇಲಾಖೆ, ತಾಲೂಕು ಆಡಳಿತ, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ .