ಕರ್ನಾಟಕ

'ಮಾತಿನ ಭರದಲ್ಲಿ ಅನಂತ ಕುಮಾರ್ ಹೆಗಡೆಗೆ ಹುಚ್ಚ ಎಂದಿದ್ದಾರೆ' : MLC ರವಿಕುಮಾರ್ ಹೇಳಿಕೆಗೆ ಕಾರಜೋಳ ಸಮರ್ಥನೆ

ಮಾಜಿ ಸಂಸದ ಅನಂತಕುಮಾರ್ ಹೆಗಡೆಗೆ ಎಂಎಲ್‌ಸಿ ರವಿಕುಮಾರ ಹುಚ್ಚ ಎಂದು ಹೇಳಿದ್ದಾರೆ.

ಚಿತ್ರದುರ್ಗ: ಮಾಜಿ ಸಂಸದ ಅನಂತಕುಮಾರ್ ಹೆಗಡೆಗೆ ಎಂಎಲ್‌ಸಿ ರವಿಕುಮಾರ್‌ ಹುಚ್ಚ ಎಂದು ಹೇಳಿದ್ದಾರೆ. ಇದೀಗ ರವಿಕುಮಾರ್‌ ಅವರ ಈ ಹೇಳಿಕೆ ಭಾರೀ ವೈರಲ್‌ ಆಗಿದೆ.

ಇನ್ನು ರವಿಕುಮಾರ್‌ ಹೇಳಿಕೆಗೆ ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದು, ರವಿಕುಮಾರ್ ಅವರು ಭಾಷಣದ ಭರದಲ್ಲಿ ಈ ರೀತಿ ಮಾತನಾಡಿರುತ್ತಾರೆ. ಅದನ್ನೆಲ್ಲ ವೈಯಕ್ತಿಕವಾಗಿ ತೆಗೆದುಕೊಳ್ಳಲಾಗಲ್ಲ. ಅನಂತ ಕುಮಾರ ಹೆಗಡೆ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಹಾಗೆ ಹೇಳಿದ್ದರು ಎಂದು ಕಾರಜೋಳ ಸಮರ್ಥಿಸಿಕೊಂಡಿದ್ದಾರೆ.