ಕಲಬುರಗಿ: ರಾಜ್ಯದಲ್ಲಿ ರೇಷನ್ ಕಾರ್ಡ್ ರಗಳೆ ಜೋರಾಗಿದೆ. ಸರ್ಕಾರದ ವಿರುದ್ದ ಬಿಜೆಪಿ ನಾಯಕರು ಒಬ್ಬೊಬ್ಬರಾಗಿ ಕಿಡಿಕಾರುತ್ತಿದ್ದಾರೆ. ಸರ್ಕಾರ ರೇಷನ್ ಕಾರ್ಡ್‌ಗಳನ್ನೇ ರದ್ದು ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಅನರ್ಹ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಂಡಿದೆ. ಸರ್ಕಾರ ಸದ್ದಿಲ್ಲದೆ ಬಿಪಿಎಲ್ ಕಾರ್ಡ್ ಆಪರೇಷನ್ಗೆ ಇಳಿದಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಮಾಡಿ ರದ್ದು ಮಾಡಿದೆ. ಇದೀಗ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಸಮರ ಸಾರಿದ್ದು, ಬಡವರಿಗೆ 10 ಕೆಜಿ ಅಕ್ಕಿ ಘೋಷನೆ ಮಾಡಿ ಅದನ್ನ ಕೊಡೋಕೆ ಆಗದಿರುವ ಕಾರಣ ಈ ಸರ್ಕಾರ ರೇಷನ್ ಕಾರ್ಡ್‌ಗಳನ್ನೇ ರದ್ದು ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದು, ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗ್ತಿದೆ. ಬಿಪಿಎಲ್ ಕಾರ್ಡ್ ದಾರರನ್ನ ಎಪಿಎಲ್ ಮಾಡ್ತಿದ್ದಾರೆ. ಬಿಪಿಎಲ್ ಕಾರ್ಡ್ ದಾರರ ಪರಿಸ್ಥಿತಿಯೇ ಸರಿಯಿಲ್ಲ, ಅಂತಹವರ ಬಿಪಿಎಲ್ ಕಾರ್ಡ್ ಕಸಿದುಕೊಳ್ಳಲಾಗ್ತಿದೆ. ಬಿಪಿಎಲ್ ಕಾರ್ಡ್ ತೆಗೆಯಬೇಡಿ, ಅವರಿಗೆ ಒಂದೇ ಸಾರಿ ಅವಕಾಶ ಕೊಡಿ.. ಅವರ ಆದಾಯ ಅವರು ಡಿಕ್ಲೇರ್ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.