ಹಾಸನ : ಲೋಕಸಭಾ ಚುನಾವಣೆಯಲ್ಲಿ 2 ಲಕ್ಷ ಅಂತರದಿಂದ ಪ್ರಜ್ವಲ್ ರೇವಣ್ಣ ಗೆಲ್ಲಬೇಕಿತ್ತು ಆದರೆ ಕೆಲವರ ಕುತಂತ್ರದಿಂದ ಸೋಲು ಅನುಭವಿಸಬೇಕಾಯಿತು ಮುಂದಿನ ದಿನಗಳಲ್ಲಿ ಬಡ್ಡಿ ಸಮೇತ ತೀರಿಸುವ ಕಾಲ ಹತ್ತಿರದಲ್ಲಿದೆ ಎಂದು ಎದುರಾಳಿಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಟಾಂಗ್ ನೀಡಿದ್ದಾರೆ.
ಈ ಕುರಿತು ಹಾಸನದಲ್ಲಿ ಮಾತನಾಡಿದ ಅವರು, ಇನ್ನೂ ಮೂರು ವರ್ಷ ಸ್ವಲ್ಪ ಸುಮ್ಮನಿರಿ, ನನಗೆ ಕೊಟ್ಟಿದ್ದನ್ನ ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿಕಾರಿದ್ದಾರೆ. ದೇವೇಗೌಡರ ಕುಟುಂಬ ಇಂತಹ ನೂರಾರು ತನಿಖೆ ಎದುರಿಸಿದೆ ಗೆದ್ದಿದ್ದೀವಿ. ದೇವೇಗೌಡರು ನಂಬಿದ ಕೆಲವು ಮುಖಂಡರು ಬೆನ್ನಿಗೆ ಚಾಕು ಹಾಕಿದ್ದಾರೆ ಅದರಲ್ಲಿ ಸಣ್ಣದೊಂದು ಚುನಾವಣೆ ಎದುರಿಸದ ಹೆಚ್. ಕೆ. ಜವರೇಗೌಡ ಅವರನ್ನು ರಾಜ್ಯಸಭೆ ಸದಸ್ಯರಾಗಿ ಮಾಡಲಾಗಿತ್ತು. ಅವರು ಏನು ಮಾಡಿದರು ಈಗ ಎಲ್ಲಿದ್ದಾರೆ ಇರುವ ಪಕ್ಷದಲ್ಲಿ ಏನು ಮಾಡ್ತಿದ್ದಾರೆ ಎಂದು ನಿಮಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಇನ್ನು 15-20 ವರ್ಷಗಳಿಂದ ನೆನ್ನೆ ಮೊನ್ನೆವರೆಗೂ ನಮ್ಮ ಜೊತೆ ಇದ್ದು ಈಗ ಗಿರಾಕಿ ಬೇರೆ ಪಕ್ಷಕ್ಕಾಗಿ ನಮ್ಮ ಬಗ್ಗೆ ಮಾತನಾಡುತ್ತಿವೆ ಮುಂದಿನ ಮೂರು ವರ್ಷ ಕಳೆಯಲಿ ಅವರು ಯಾವ ಸ್ಥಿತಿಗೆ ಕಳುಹಿಸುತ್ತೇನೆಂದು ನೀವೇ ನೋಡುತ್ತೀರಿ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿ, ಹಾಸನದಲ್ಲಿ ಹೆಚ್.ಎಸ್ ಪ್ರಕಾಶನನ್ನು ನಾಲ್ಕು ಬಾರಿ ಗೆಲ್ಲಿಸಿದ್ದರು. 2013ರಲ್ಲಿ ಪ್ರಕಾಶ್ ಗೆ ಸೀಟ್ ಕೊಡಿಸಿಕೊಂಡು ಬಂದೆ, ಅಲ್ಪಸಂಖ್ಯಾತರಿಂದಾಗಿ ಪ್ರಕಾಶ್ ಸೋತರು. 2023ರ ಚುನಾವಣೆಯಲ್ಲಿ ಹಾಸನದಲ್ಲಿ ಐವತ್ತು ಸಾವಿರ ವೋಟಿಗೆ ಒಂದು ವೋಟು ಕಡಿಮೆಯಾದರೆ ರಾಜೀನಾಮೆ ಕೊಡ್ತಿನಿ ಅಂಥ ಚಾಲೆಂಜ್ ಹಾಕಿದ್ದರು. ಆ ಚುನಾವಣೆಗೆ ಸ್ವರೂಪ್ ನಿಲ್ಲಲು ಪ್ರಯತ್ನಪಟ್ಟ, ಆಚುನಾವಣೆಯಲ್ಲಿ ನನ್ನ ಹೆಂಡತಿಯನ್ನು ನಿಲ್ಲಿಸಲು ನಾನೇನು ದಡ್ಡನಲ್ಲ. ನಾನೇ ಅವರನ್ನು ಬಿಟ್ಟಿದ್ದೆ, ರೇವಣ್ಣನೇ ಬಂದು ನಿಲ್ಲಲಿ ಎಂದಾಗ ಯಾರನ್ನಾದರೂ ಬಿಡಬೇಕಲ್ಲ. ಅದಕ್ಕೆ ಸ್ವರೂಪ್ ಅವರನ್ನೇ ನಿಲ್ಲಿಸಬೇಕಾಯಿತು ಎಂದಿದ್ದಾರೆ.
ಹಾಸನ ಕ್ಷೇತ್ರದ ಗೆಲುವಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದರಿಂದ ಸಕಲೇಶಪುರದಲ್ಲಿ ಸೋಲಬೇಕಾಯಿತು. ದೇವೇಗೌಡರು, ಕುಮಾರಣ್ಣ, ರೇವಣ್ಣ ನಿಮ್ಮಂತಹ ಪುಣ್ಯಾತ್ಮರಿಂದ ಉಳಿದಿದ್ದಾರೆ. ಪಾಪ ಪ್ರಜ್ವಲ್ ಗೂ ಗೊತ್ತಾಗಲ್ಲ, ಅವನು ಒಳ್ಳೆಯ ಹುಡುಗ. ನಮ್ಮ ದುಡ್ಡು ತಗೊಂಡು ಅದನ್ನು ತಗೊಂಡು ಬೇರೆ ಎಲ್ಲೋ ಹಾಕಿದ್ದರು. ಅವರೆಲ್ಲಾ ನನ್ನ ಕೈಗೆಸಿಗದೇ ಎಲ್ಲಿಗೆ ಹೋಗುತ್ತಾರೆ. ಇನ್ನೂ 3 ವರ್ಷ ಸ್ವಲ್ಪ ಸುಮ್ಮನಿರಿ. ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೆಗೌಡರ ಮಗನೇ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.