ವಿದೇಶ

ಕೆನಡಾದಲ್ಲಿ ಖಲಿಸ್ಥಾನಿ ಉಗ್ರ ಅರ್ಶ್‌ ದಲ್ಲಾಗೆ ಜಾಮೀನು ಮಂಜೂರು

ಕೆನಡಾದಲ್ಲಿ ಬಂಧಿತನಾಗಿದ್ದ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್‌ ನ ಮುಖ್ಯಸ್ಥ ಅರ್ಶ್ ದಲ್ಲಾ ಅಲಿಯಾಸ್‌ ಅರ್ಶ್‌ದೀಪ್ ಸಿಂಗ್‌ ಗಿಲ್‌ಗೆ ಜಾಮೀನು ಮಂಜೂರಾಗಿದೆ.

ಒಟ್ಟಾವಾ: ಕೆನಡಾದಲ್ಲಿ ಬಂಧಿತನಾಗಿದ್ದ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಅರ್ಶ್ ದಲ್ಲಾ ಅಲಿಯಾಸ್ಅರ್ಶ್ದೀಪ್ ಸಿಂಗ್‌ ಗಿಲ್ಗೆ ಜಾಮೀನು ಮಂಜೂರಾಗಿದೆ.

ಖಲಿಸ್ತಾನಿ ಟೈಗರ್ ಫೋರ್ಸ್ ಹಂಗಾಮಿ ಮುಖ್ಯಸ್ಥ ಅರ್ಶ್ ದಲ್ಲಾನನ್ನು 2024 . 28ರಂದು ಒಂಟಾರಿಯೊದ ಮಿಲ್ಟನ್ನಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಭಾರತ ಸರ್ಕಾರ ಆತನನ್ನು ಹಸ್ತಾಂತರಿಸುವಂತೆ ಆಗ್ರಹಿಸುತ್ತಲೇ ಬಂದಿದೆ. ಇದರ ಹೊರತಾಗಿಯೂ ಅರ್ಶ್‌ ದಲ್ಲಾನಿಗೆ ಜಾಮೀನು ಮಂಜೂರಾಗಿದ್ದು, 30 ಸಾವಿರ ಡಾಲರ್‌ ಬಾಂಡ್‌ ಮೇಲೆ ಜಾಮೀನಿನ ಮೇಲೆ ಬಿಡುಗಡೆಯಾಗಲಿದ್ದಾನೆ. ಇನ್ನು ಪ್ರಕರಣದ ಮುಂದಿನ ವಿಚಾರಣೆ 2025 ಫೆ. 24ರಂದು ನಡೆಯಲಿದೆ.

ಕೆನಡಾ ಸರ್ಕಾರಕ್ಕೆ ಭಾರತ ನೀಡಿರುವ ಉಗ್ರರ ಲಿಸ್ಟ್‌ ನಲ್ಲಿ ಅರ್ಶದೀಪ್‌ ದಲ್ಲಾ ನ ಹೆಸರೂ ಇದೆ. ಖಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ ಆಪ್ತ ಸಹಾಯಕನಾಗಿರುವ ಅರ್ಶ್ ದಲ್ಲಾ ತನ್ನ ಸ್ಲೀಪರ್ ಸೆಲ್ ನೆಟ್ವರ್ಕ್ ಮೂಲಕ ಪಂಜಾಬ್ನಲ್ಲಿ ಅನೇಕ ಹತ್ಯೆಗಳನ್ನು ನಡೆಸಿದ್ದಾನೆ ಅನ್ನೋ ಆರೋಪ ಈತನ ಮೇಲಿದೆ. 2022ರಲ್ಲಿ ಡೇರಾ ಸಚ್ಚಾ ಸೌಧದ ಸದಸ್ಯ ಮನೋಹರ್ ಲಾಲ್ ಹತ್ಯೆಯಲ್ಲಿ ದಲ್ಲಾ ಮತ್ತು ನಿಜ್ಜರ್ ಕೈವಾಡ ಇದೆ ಎನ್ನಲಾಗುತ್ತಿದೆ.

ಅರ್ಶ್‌ ದಲ್ಲಾ ಪಂಜಾಬ್ ಮೊಗಾ ಜಿಲ್ಲೆಯ ದಲಾ ಪ್ರದೇಶದವನು. ದಲ್ಲಾನ ಸ್ಲೀಪರ್ ಸೆಲ್ ನೆಟ್ವರ್ಕ್ 3 ಖಂಡಗಳಲ್ಲಿ ವ್ಯಾಪಿಸಿದೆ. ಉತ್ತರ ಅಮೆರಿಕಾದಲ್ಲಿ ಕೆನಡಾ ಮತ್ತು ಅಮೆರಿಕ, ಯುರೋಪ್ ಕೆಲವು ಭಾಗಗಳು ಮತ್ತು ಏಷ್ಯಾದ ದುಬೈ, ಫಿಲಿಪೈನ್ಸ್ ಮತ್ತು ಥೈಲ್ಯಾಂಡ್ಗಳಲ್ಲಿ ಆತನ ಸೂಚನೆ ಮೇರೆಗೆ ಹಲವು ದುಷ್ಕೃತ್ಯಗಳು ನಡೆಯುತ್ತಿವೆ. ಈತನಿಗೆ  ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಅಥವಾ ಐಎಸ್ ಬೆಂಬಲ ಕೂಡ ಇದೆ ಎನ್ನಲಾಗುತ್ತಿದೆ.

ಸ್ಥಳೀಯವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವನು 2020ರಲ್ಲಿ ಸ್ಟಡಿ ವೀಸಾದಲ್ಲಿ ಕೆನಡಾಕ್ಕೆ ತೆರಳಿದ್ದ. ಬಳಿಕ ಭಾರತದ ಮೋಸ್ಟ್ವಾಂಟೆಡ್ಕ್ರಿಮಿನಲ್ಆಗಿ ಬದಲಾಗಿದ್ದ.