ಕರ್ನಾಟಕ
ಕಿಶೋರ್ ಕುಮಾರ್ ಅಭಿನಯದ "ಅನಾಮಧೇಯ ಅಶೋಕ್ ಕುಮಾರ್'' ಸದ್ಯದಲ್ಲೇ ತೆರೆಗೆ ..!
ಸಾಗರ್ ಕುಮಾರ್ ಚೊಚ್ಚಲ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ತಮ್ಮ ಅಮೋಘ ಅಭಿನಯದ ಮೂಲಕ ಇಡೀ ದೇಶದಾದ್ಯಂತ ಜನಪ್ರಯರಾಗಿರುವ ಖ್ಯಾತ ನಟ ಕಿಶೋರ್ ಕುಮಾರ್ ಹಾಗೂ "ಆಚಾರ್ & ಕೋ" ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಹರ್ಷಿಲ್ ಕೌಶಿಕ್ ಪ್ರಮುಖಪಾತ್ರದಲ್ಲಿ ನಟಿಸಿರುವ ಚಿತ್ರ "ಅನಾಮಧೇಯ ಅಶೋಕ್ ಕುಮಾರ್". ಸಾಗರ್ ಕುಮಾರ್ ಚೊಚ್ಚಲ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಮೋಷನ್ ಪೋಸ್ಟರ್ ಮೂಲಕ ಮೋಡಿ ಮಾಡಿರುವ ಈ ಚಿತ್ರ ಥ್ರಿಲ್ಲರ್ ಕಥಾಹಂದರ ಹೊಂದಿದೆ. ನಿರ್ದೇಶಕ ಸಾಗರ್ ಕುಮಾರ್ ಕಥೆ ಬರೆದಿದ್ದಾರೆ. ಚಿತ್ರಕಥೆಯನ್ನು ಬೆನ್ನಿ ಥಾಮಸ್ ಹಾಗೂ ಸಾಗರ್ ಕುಮಾರ್ ಬರೆದಿದ್ದಾರೆ. ಈ ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಹರ್ಷಿಲ್ ಕೌಶಿಕ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಕಾಂತರಾಜ್ ಕಡ್ಡಿಪುಡಿ, ಸುಧೀಂದ್ರನ್ ನಾಯರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಎಸ್ ಕೆ ಎನ್ ಫಿಲಂಸ್ ಲಾಂಛನದಲ್ಲಿ ನಿರ್ಮಲಾ ಕುಮಾರ್ ಹಾಗು ರಮ್ಯ ಸಾಗರ್ ಕುಮಾರ್ ಈ ನಿರ್ಮಿಸಿರುವ ಈ ಚಿತ್ರಕ್ಕೆ ಕಿಶೋರ್ ಕುಮಾರ್ ಅವರ ಸಹ ನಿರ್ಮಾಣವಿದೆ. ಎರಡು ಹಾಡುಗಳಿದ್ದು, ಅಜಾದ್ ಸಂಗೀತ ಸಂಯೋಜಿಸಿದ್ದಾರೆ. ಸುನೀಲ್ ಹೊನಳ್ಳಿ ಛಾಯಾಗ್ರಹಣ ಹಾಗೂ ಮತ್ತು ಕೆ.ಯೇಸು ಅವರ ಸಂಕಲನ ಬಹು ನಿರೀಕ್ಷಿತ "ಅನಾಮಧೇಯ ಅಶೋಕ್ ಕುಮಾರ್" ಚಿತ್ರಕ್ಕಿದೆ. ಈ ಚಿತ್ರದ ಮಾರ್ಕೆಟಿಂಗ್ ಪ್ರಿಯಾಂಕ ಅವರು ಮಾಡುತ್ತಿದ್ದಾರೆ.