ಬೆಳಗಾವಿ : ಕಿತ್ತೂರು ಚನ್ನಮ್ಮನ 200ನೇ ವಿಜಯೋತ್ಸವದ ಉತ್ಸವಕ್ಕೆ ಚಾಲನೆ ನೀಡಿದ್ದು, ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸಚಿವರು ಜ್ಯೋತಿ ಬರಮಾಡಿಕೊಂಡಿದ್ದಾರೆ. ಬೆಂಗಳೂರು ವಿಧಾನಸೌಧದಿಂದ ಹೊರಟು ಇಡೀ ರಾಜ್ಯ ಸಂಚರಿಸಿ ಜ್ಯೋತಿ ಕಿತ್ತೂರಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಉತ್ಸವ ನಡೆಯುತ್ತಿದೆ.

ಇಂದಿನಿಂದ ಮೂರು ದಿನ ಕಿತ್ತೂರು ರಾಣಿ ಚನ್ನಮ್ಮ ಅದ್ಧೂರಿ ಉತ್ಸವಕ್ಕೆ ಚಾಲನೆ ನೀಡಿದ್ದು, ರಾಣಿ ಚನ್ನಮ್ಮ ಮೂರ್ತಿಗೆ ಗಣ್ಯರಿಂದ ಮಾಲಾರ್ಪಣೆ ನೆರವೇರಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಬಾಬಾಸಾಹೇಬ್ ಪಾಟೀಲ್, ಆಸೀಫ್ ಸೇಠ್, ಮಹಾಂತೇಶ್ ಕೌಜಲಗಿ, ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಅವರಿಂದ ಮಾಲಾರ್ಪಣೆ ನೆರವೇರಿದೆ. ಚನ್ನಮ್ಮ ವೃತದಿಂದ ಕೋಟೆ ಆವರಣದ ವರೆಗೆ ಅದ್ಧೂರಿ ಮೆರವಣಿಗೆ ನಡೆದಿದೆ. ಕಥಕ್ ಕಳಿ, ಚಿಟ್ಟೆ ಮೇಳ, ಮಹಿಳಾ ವೀರಗಾಸೆ ಸೇರಿ ಜಾನಪದ ಕಲಾ ತಂಡಗಳು ಭಾಗಿಯಾಗಿವೆ. ಮೆರವಣಿಗೆಯಲ್ಲಿ 68 ವಿವಿಧ ಜಾನಪದ ಕಲಾ ತಂಡಗಳು ಭಾಗಿಯಾಗಿವೆ.
