ಕರ್ನಾಟಕ

ಕೊರಟಗೆರೆಯಲ್ಲಿ ವಾಲ್ಮೀಕಿ ಮೂರ್ತಿ ವಿವಾದದ ಬಗ್ಗೆ ಕೆ.ಎನ್ ರಾಜಣ್ಣ ಗರಂ..!

ಅವನ್ಯಾರೋ ಅಧಿಕಾರಿ ಮೂರ್ಖ ರಾತ್ರೋರಾತ್ರಿ ಅದನ್ನು ತೆಗೆದುಬಿಟ್ಟಿದ್ದಾನೆ. ಜನರಿಗೆ ಮನವೊಲಿಸಿ ಇನ್ನೊಂದು ಕಡೆ ಇಡಬಹುದಾಗಿತ್ತು. ಆದರೆ ಕಾನೂನು ಕೈಗೆತ್ತಿಕೊಳ್ಳಬಾರದಿತ್ತು ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ.

ತುಮಕೂರು ಜಿಲ್ಲೆ  ಕೊರಟಗೆರೆಯಲ್ಲಿ ನಡೆದ ವಾಲ್ಮೀಕಿ ಮೂರ್ತಿ ವಿವಾದದ ಬಗ್ಗೆ, ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ನಡೆದ ವಾಲ್ಮೀಕಿ ಜಯಂತೋತ್ಸವದಲ್ಲಿ ಮಾತನಾಡಿದ ಅವರು, ಏನೇ ಕೆಲಸ ಮಾಡಿದರೂ ವ್ಯವಸ್ಥಿತವಾಗಿ ಮಾಡಬೇಕು. ಹೀಗ್ಯಾಕೆ ಮಾಡೋಕೆ ಹೋದ್ರಿ. ಕದ್ದು ಇಡುವಂತಹ ಯಾಕೆ , ಮಾಡ್ಬೇಕಾದ್ರೆ ಎಲ್ಲಾರು ಸೇರ್ಕೊಳ್ಳೋಣ ಇಡೋಣ ಎಂದು ಹೇಳಿದ್ದಾರೆ. 

ಅವನ್ಯಾರೋ ಅಧಿಕಾರಿ ಮೂರ್ಖ ರಾತ್ರೋರಾತ್ರಿ ಅದನ್ನು ತೆಗೆದುಬಿಟ್ಟಿದ್ದಾನೆ. ಜನರಿಗೆ ಮನವೊಲಿಸಿ ಇನ್ನೊಂದು ಕಡೆ ಇಡಬಹುದಾಗಿತ್ತು. ಆದರೆ ಕಾನೂನು ಕೈಗೆತ್ತಿಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ.