ದೇಶ

ತಿರುಪತಿ ಲಡ್ಡು ತಯಾರಿಕೆಗೆ ಇನ್ಮುಂದೆ ಕೋಲಾರದ ತುಪ್ಪ ಬಳಕೆ

ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಿರುವುದು ದೃಢವಾಗಿದೆ. ಈ ಬೆಳವಣಿಗೆ ತಿಮ್ಮಪ್ಪನ ಭಕ್ತಾದಿಗಳಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ಭಕ್ತರ ಭಯ ದೂರಗೊಳಿಸಲು ಟಿಟಿಡಿ ಹೊಸ ನಿರ್ಧಾರ ತೆಗೆದುಕೊಂಡಿದೆ. ಅಂದರೆ ತಿರುಪತಿಯಲ್ಲಿ ಲಡ್ಡು ತಯಾರಿಕೆಗೆ ಇನ್ನುಮುಂದೆ KMF ನಿಂದ ರವಾನೆಯಾಗುವ ತುಪ್ಪವನ್ನೇ ಬಳಸಲಾಗಲಿದೆ ಎನ್ನಲಾಗ್ತಿದೆ.

ಇನ್ನುಮುಂದೆ ತಿರುಪತಿ ಲಡ್ಡು ತಯಾರಿಕೆಗೆ ಕೋಲಾರದ ತುಪ್ಪ ರವಾನೆಯಾಗಲಿದೆ. ಈ ಬಗ್ಗೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ, ವೈ.ನಂಜೇಗೌಡ ತಿಳಿಸಿದ್ದಾರೆ. ಇನ್ಮುಂದೆ KMF ನಿಂದಲೇ ತುಪ್ಪ ರವಾನೆಯಾಗುತ್ತೆ ಎಂದಿದ್ದಾರೆ.

KMF ಜೊತೆಗೆ TTD ಆಡಳಿತ ಮಂಡಳಿ ತುಪ್ಪ ರವಾನೆಗೆ ಒಪ್ಪಂದವಾಗಿದೆ, ತಿರುಪತಿಗೆ ಕೋಲಾರ ಜಿಲ್ಲೆ ಸಮೀಪದಲ್ಲಿರುವ ಕಾರಣ ಕೋಲಾರದಿಂದ ತುಪ್ಪ ರವಾನೆ ಮಾಡ್ತೇವೆ. ಕೋಲಾರದಿಂದ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ರವಾನೆಯಾಗಲಿದೆ ಎಂದು ಕೋಚಿಮುಲ್ ಕಚೇರಿಯಲ್ಲಿ ಅಧ್ಯಕ್ಷ್ಯ ಕೆವೈ ನಂಜೇಗೌಡ ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ಕರ್ನಾಟಕದ ದೇವಾಲಯಗಳಲ್ಲೂ ನಂದಿನಿ ತುಪ್ಪ ಬಳಸಲು, ಸರ್ಕಾರ ಸೂಚನೆ ನೀಡಿದೆ ಎಂದಿದ್ದಾರೆ