ಕ್ರೀಡೆಗಳು

ಫಿಡೆ ವರ್ಲ್ಡ್‌ ರ‍್ಯಾಪಿಡ್ ಚಾಂಪಿಯನ್‌ಷಿಪ್‌ ಗೆದ್ದ ಕೊನೇರು ಹಂಪಿ

ಭಾರತದ ಚೆಸ್‌ ತಾರೆ ಕೊನೇರು ಹಂಪಿ ಫಿಡೆ ವರ್ಲ್ಡ್‌‌ ರ‍್ಯಾಪಿಡ್ ಚಾಂಪಿಯನ್‌ಷಿಪ್‌ 2024 ಅನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ರ‍್ಯಾಪಿಡ್ ಚಾಂಪಿಯನ್‌ ಆದ ಸಾಧನೆ ಮಾಡಿದ್ದಾರೆ.

ನ್ಯೂಯಾರ್ಕ್‌: ಭಾರತದ ಚೆಸ್‌ ತಾರೆ ಕೊನೇರು ಹಂಪಿ ಫಿಡೆ ವರ್ಲ್ಡ್‌‌ ರ‍್ಯಾಪಿಡ್ ಚಾಂಪಿಯನ್‌ಷಿಪ್‌ 2024 ಅನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ರ‍್ಯಾಪಿಡ್ ಚಾಂಪಿಯನ್‌ ಆದ ಸಾಧನೆ ಮಾಡಿದ್ದಾರೆ.

ಅಮೆರಿಕದ ನ್ಯೂಯಾರ್ಕ್‌ ನಲ್ಲಿ ನಡೆದ ಟೂರ್ನಿಯ ಮಹಿಳೆಯರ ವಿಭಾಗದ ಫೈನಲ್‌ ನಲ್ಲಿ ಇಂಡೋನೇಷ್ಯಾದ ಐರಿನ್‌ ಸುಕಂದರ್‌ ಅವರ ವಿರುದ್ಧ 8.5/11 ಅಂಕಗಳ ಅಂತರದಿಂದ ಜಯ ಸಾಧಿಸಿದ ಕೊನೇರು ಹಂಪಿ ಚಾಂಪಿಯನ್‌ ಷಿಪ್‌ ಅನ್ನು ಮುಡಿಗೇರಿಸಿಕೊಂಡರು. ಈ ಹಿಂದೆ 2019 ರಲ್ಲಿ ಜಾರ್ಜಿಯಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ರ‍್ಯಾಪಿಡ್ ಚೆಸ್‌ ಚಾಂಪಿಯನ್‌ ಆಗಿದ್ದರು. ಹಂಪಿಯನ್ನು ಹೊರತುಪಡಿಸಿದರೆ ಚೀನಾ ಜು ವೆನ್ಜುನ್‌ ಅವರು ಮಾತ್ರ ಎರಡು ಬಾರಿ ರ‍್ಯಾಪಿಡ್ ಚೆಸ್‌ ಚಾಂಪಿಯನ್‌ ಆಗಿದ್ದರು. ಉಳಿದಂತೆ ಕೊನೇರು ಹಂಪಿ 2012 ರಲ್ಲಿ ರ‍್ಯಾಪಿಡ್ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದರು.

ಪುರುಷರ ವಿಭಾಗದಲ್ಲಿ ರಷ್ಯಾದ 18 ವರ್ಷದ ಆಟಗಾರ ವೊಲೊಡರ್‌ ಮುರ್ಜಿನ್‌ ಪ್ರಶಸ್ತಿ ಜಯಿಸಿದರೆ, ಭಾರತದ ಅರ್ಜುನ್‌ ಎರಿಗೈಸಿ 5 ನೇ ಸ್ಥಾನ ಪಡೆದಿದ್ದಾರೆ.