ಕರ್ನಾಟಕ

ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರ ಹಾಕಿದ ಕುಮಾರ ಬಂಗಾರಪ್ಪ

ಕೋರ್ ಕಮಿಟಿಯಲ್ಲಿ ಚರ್ಚೆ ನಡೆದಿರೋದು ಅಲ್ಲೇ ಇರಬೇಕಿತ್ತು. ಆದ್ರೆ ಕೋರ್ ಕಮಿಟಿ ಸಭೆಯಲ್ಲಿ ನಡೆದ ಚರ್ಚೆ ಬಹಿರಂಗವಾಗಿ ಗೊಂದಲ ಉಂಟಾಗಿದೆ ಎಂದು ಕುಮಾರ ಬಂಗಾರಪ್ಪ ಅಸಮಾಧನ ಹೊರಹಾಕಿದ್ದಾರೆ.

ಮೊನ್ನೆ ರಾಧಾಮೋಹನ ದಾಸ್ ಅಗರವಾಲ್ ರಾಜ್ಯಕ್ಕೆ ಬಂದು ಸಭೆ ಮಾಡಿದ್ರು. ಆದ್ರೆ ಜಿಲ್ಲೆಗಳಿಗೆ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಮ್ಮನ್ಯಾರೂ ಅಭಿಪ್ರಾಯ ಕೇಳಲಿಲ್ಲ ಎಂದು ಮಾಜಿ ಶಾಸಕ ಕುಮಾರ ಬಂಗಾರಪ್ಪ ಅಸಮಾಧಾನ ಹೊರಹಾಕಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಕುಮಾರ ಬಂಗಾರಪ್ಪ, ಅನೇಕ ಜಿಲ್ಲೆಗಳಲ್ಲಿ ಇನ್ನೂ ಗೊಂದಲವಿದೆ. ಪಕ್ಷ ಉತ್ತಮವಾಗಿ ಮುನ್ನಡೆಸುವುದು, ಒಗ್ಗಟ್ಟಾಗಿ ನಡೆಸುವ ಅಗತ್ಯವಿದೆ. ಮೊನ್ನೆ ಅಗರವಾಲ್ ಇದ್ದ ಕೋರ್ ಕಮಿಟಿ ಸಭೆಯಲ್ಲೂ ಸಾಕಷ್ಟು ಚರ್ಚೆ ಮಾಡಲಾಗಿದೆ. ಮಂಡಲ, ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಪಾರದರ್ಶಕತೆ ಇರಲಿಲ್ಲ. ಶ್ರೀರಾಮುಲು ಅವರ ವಿಚಾರದಲ್ಲಿ ನಮಗೂ ಬೇಸರ ಇದೆ. ರಾಮುಲು ಅವರ ವಿಚಾರದಲ್ಲಿ ಚರ್ಚೆ ಆಗಿದ್ದು ನಾಲ್ಕು ಗೋಡೆ ಮಧ್ಯೆಯೇ ಇರಬೇಕಿತ್ತು ಆದರೆ, ಅದೀಗ ಚರ್ಚೆಯ ವಿಚಾರವಾಗಿದೆ. ರಿಸಲ್ಟ್ ಬಂದ ನಂತರ ಯಾರದ್ದು ತಪ್ಪು ಯಾರದ್ದು ಸರಿ ಅಂತ ಚರ್ಚೆ ಆಗೋದು ಸಹಜ. ಆದ್ರೆ ಕೋರ್ ಕಮಿಟಿಯಲ್ಲಿ ಚರ್ಚೆ ನಡೆದಿರೋದು ಅಲ್ಲೇ ಇರಬೇಕಿತ್ತು. ಆದ್ರೆ ಕೋರ್ ಕಮಿಟಿ ಸಭೆಯಲ್ಲಿ ನಡೆದ ಚರ್ಚೆ ಬಹಿರಂಗವಾಗಿ ಗೊಂದಲ ಉಂಟಾಗಿದೆ ಎಂದು ಅಸಮಾಧನ ಹೊರಹಾಕಿದ್ದಾರೆ.