ಮೈಸೂರು : ಬಿಜೆಪಿ ಅವರು ಯಾವತ್ತಾದರೂ ನುಡಿದಂತೆ ನಡೆದಿದ್ದಾರಾ? ನರೇಂದ್ರ ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಯಾವತ್ತಾದರೂ ನುಡಿದಂತೆ ನಡೆದಿದ್ದಾರಾ? ಬಿಜೆಪಿ ಅವರು ಕುಮಾರಸ್ವಾಮಿ ಮಾಡಿದ್ದು ಬರೀ ಲೂಟಿ ಸರಕಾರ. ಈಗ ಅವರಿಗೆಲ್ಲಾ ಹೊಟ್ಟೆ ಉರಿ ಶುರುವಾಗಿದೆ ಹಿಂದುಳಿದ ವರ್ಗಕ್ಕೆ ಸೇರಿದವನು ಎರಡನೇ ಬಾರಿ ಸಿಎಂ ಆಗಿದ್ದನ್ನು ತಡೆದು ಕೊಳ್ಳಲು ಬಿಜೆಪಿ ಕೈಯಲ್ಲಿ ಆಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
)
ಇದೇ ವೇಳೆ ಮಾತನಾಡಿದ ಅವರು, ನಾನು ಅಭಿವೃದ್ಧಿ ಕೆಲಸ ಮಾಡೋದೆ ತಪ್ಪಾ? ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇ ನನ್ನ ತಪ್ಪಾ? ಸಾಮಾಜಿಕ ನ್ಯಾಯಕ್ಕೆ, ಬಡವರಿಗೆ, ಹಿಂದುಳಿದ ವರ್ಗದವರಿಗೆ ಬಿಜೆಪಿ ಯಾವತ್ತಿಗೂ ವಿರೋಧ ಮಾಡುತ್ತೆ. ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದೇವೆ ಎಂದು ಮೋದಿ, ಅಮಿತ್ ಶಾ, ಯಡಿಯೂರಪ್ಪ ಹೇಳಲಿ ನೋಡೋಣಾ ಎಂದು ಸವಾಲ್ ಹಾಕಿದ್ದಾರೆ.
ನಮ್ಮ ರಾಜ್ಯಕ್ಕೆ ಕೇಂದ್ರ ಹಣಕಾಸಿನ ತಾರತಮ್ಯ ಮಾಡುತ್ತಿದೆ. ತೆರಿಗೆ ಕಟ್ಟುವವರು ನಾವು. ನಾವು ನಮ್ಮ ಹಣ ನಮಗೆ ವಾಪಾಸ್ ಕೊಡಿ ಅಂತಾ ಭಿಕ್ಷೆ ಬೇಡಬೇಕಾ? ಉತ್ತರ ಭಾರತಕ್ಕೆ ಒಂದು ನ್ಯಾಯ ಕರ್ನಾಟಕಕ್ಕೆ ಒಂದು ನ್ಯಾಯನಾ? ನಾವೇನೂ ಪಾಪಾ ಮಾಡಿದ್ದೇವೆ. ಹೆಚ್ಚು ತೆರಿಗೆ ಕಟ್ಟುತ್ತಿರುವುದೆ ತಪ್ಪಾ? ನಮ್ಮ ಪಾಲಿನ ಹಣ ನಮಗೆ ಕೊಡಿಸುವ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ನವರು ಬಾಯಿ ಬಿಡುತ್ತಿಲ್ಲ. 15 ನೇ ಹಣಕಾಸಿನ ಯೋಜನೆಯಲ್ಲಿ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗ್ತಿದೆ ಎಂದು ಸಿಎಂ ಹರಿಹಾಯ್ದಿದ್ದಾರೆ