ಕರ್ನಾಟಕ

ಪ್ರತಿ ಚುನಾವಣೆಗೆ ಕುಮಾರಸ್ವಾಮಿ ನರಬಲಿ ಕೊಡುತ್ತಾರೆ - ಈ ಬಾರಿ ನಿಖಿಲ್​ ಅಹುತಿನಾ..?

ಚನ್ನಪಟ್ಟಣಕ್ಕೆ ಯಾಕೆ ಬಂದದ್ದೀರಾ ಸ್ವಾಮಿ - ಚೆಲುವರಾಯ ಸ್ವಾಮಿ ಸವಾಲು

ನಾಗಮಂಗಲ - ಚನ್ನಪಟ್ಟಣ ಬೈ ಎಲೆಕ್ಷನ್ನಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಬಳಿಕ ಆರೋಪ - ಪ್ರತ್ಯಾರೋಪ ಭರಾಟೆ ರಾಜಕೀಯ ಅಖಾಡದಲ್ಲಿ ಜೋರಾಗಿದೆ.ಎಲೆಕ್ಷನ್ ಬಂದಾಗ ಕುಟುಂಬದವರನ್ನ ಅಧಿಕಾರಕ್ಕೆ ತರಲು ಕುಮಾರಸ್ವಾಮಿ ನರಬಲಿ ತೆಗೆದುಕೊಳ್ತಾರೆ ಎಂದು ನಾಗಮಂಗಲ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆಕ್ರೋಶ ಹೊರಹಾಕಿದ್ದಾರೆ. 

ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮೇಗೌಡ , ಹೋಮದಲ್ಲಿ ಬೆಂಕಿ ಹಾಕಿ ಆಹುತಿ ಮಾಡುತ್ತಾರೆ , ಹಾಗೆ ಪಾಪ ನಿಖಿಲ್ ರನ್ನ ಮೂರನೇ ಸರಿ ಆಹುತಿ ಕೊಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ವಾಗ್ದಾಳಿ ಮಾಡಿದ್ದಾರೆ. 

ವಿಜಯೇಂದ್ರ ಬಿಜೆಪಿ ಕಟ್ಟುತ್ತಾರೆ ಅಂದುಕೊಂಡಿದೆ. ಆದರೆ , ಬಿಜೆಪಿ ಕುತ್ತಿಗೆ ಇಸುಕಿಬಿಟ್ಟಿದ್ದಾರೆ. ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನ ಸಂಪೂರ್ಣವಾಗಿ ಉಸಿರುಗಟ್ಟಿಸಿದರು. ಇನ್ನೂ , ದಳದವರು ಬಿಜೆಪಿಯನ್ನ ಹಾಗೂ ಬಿಜೆಪಿಯವರನ್ನ ನುಂಗುತ್ತಿದ್ದಾರೆ. ಡಾ.ಮಂಜುನಾಥ್ ಅವರಿಗೆ ಟಿಕೆಟ್ ಕೊಡಿಸಲು ನಮ್ಮ ಯೋಗೇಶ್ ತುಂಬಾ ಕಷ್ಟ ಪಟ್ಟಿದರು. ಈಗ ಯೋಗೇಶ್ವರನ್ನ ಬಲಿಯಾಗೋದ ಪಾಪ ಎಂದು ಅನುಕಂಪದ ಮಾತನಾಡಿದರು. ಪ್ರತಿ ಎಲೆಕ್ಷನ್ ಬಂದಾಗ ಅವರ ಕುಟುಂಬದವರನ್ನ ಅಧಿಕಾರಕ್ಕೆ ತರಲು ಒಂದೊಂದು ನರ ಬಲಿ ತೆಗೆದುಕೊಳ್ಳುತ್ತಾರೆ. 

ರಾಜ್ಯದಲ್ಲಿ ಇವರು ನಡೆದುಕೊಂಡು ಬಂದಿರೋದೆ ಹೀಗೆ, ಚನ್ನಪಟ್ಟಣದ ಜನ ದಡ್ಡರಲ್ಲ , ಯೋಗೀಶ್ ಟಿಕೆಟ್ ಘೋಷಣೆ ಆಗ್ತಿದ್ದಂತೆ ಅಲ್ಲಿ ನಿಖಿಲ್ ಅಲ್ಲಾ ಕುಮಾರಸ್ವಾಮಿ ಬಂದ್ರು ಏನು ಮಾಡಕ್ಕಾಗಲ್ಲ ಎಂದು ಗುಡುಗಿದರು. ಯೋಗೇಶ್ವರ್ ಬಿಜೆಪಿಯಿಂದ ಹೊರ ಕಳಿಸಲು ಯಡ್ಡಿಯೂರಪ್ಪನೇ ಕಾರಣ, ಬಿಜೆಪಿಯ ಗುಂಪುಗಾರಿಕೆ ಇನ್ನೂ ಇದೆ. ಕುಮಾರಸ್ವಾಮಿ ಅವರೇ ಎವರಿ ಡೇ ನಾಟ್ ಸಂಡೆ ಈ ಬಾರಿ ನಿಖಿಲ್ ಬಲಿಯಾಗೆ ಆಗ್ತಾನೆ ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಭವಿಷ್ಯ ನುಡಿದರು. 

ನಿಖಿಲ್ ಕುಮಾರಸ್ವಾಮಿಯನ್ನ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮಾಡೋಕಾಗಲ್ಲ.ಕುಮಾರಸ್ವಾಮಿ ಬೃಹನಾಟಕ ಮಾಡಿ ಮಗನನ್ನ ನಿಲ್ಲಿಸಿದ್ದಾರೆ.ಯಡ್ಡಿಯೂರಪ್ಪ ಬಂದರೂ ಕೂಡ, ವಿಜಯೇಂದ್ರ ಅಲ್ಲೆ ಹೋಗಿ ಮಲ್ಕೊಂಡ್ರು ಕೂಡ ಚನ್ನಪಟ್ಟಣ ಚುನಾವಣೆ ಗೆಲ್ಲೋಕೆ ಸಾಧ್ಯವೆ ಇಲ್ಲ ಎಂದು ಸವಾಲು ಹಾಕಿದ್ದಾರೆ. 

ಮಂಡ್ಯ ಜಿಲ್ಲೆಗೆ ಯಾಕೆ ಬರ್ತೀರಿ ಸ್ವಾಮಿ ನೀವು? ರಾಮನಗರದಲ್ಲಿ ಬಂಡೆ ಇದೆ ಅಂತ ಇಲ್ಲಿಗೆ ಬಂದಿದ್ದೀರಿ. ನಾಳೆ MLA ಎಲೆಕ್ಷನ್ಗೆ ಇಲ್ಲಿಗೆ ಬರೋಲ್ಲ ಅಂತ ಏನ್ ಗ್ಯಾರಂಟಿ.? ಸಿದ್ದರಾಮಯ್ಯ ಬಾದಾಮಿಗೆ ಹೋಗಿದರೆ ಅದನ್ನ ಅಲ್ಲಿ ಪ್ರಶ್ನೆ ಮಾಡಿಕೊಳ್ಳಿ , ರಾಹುಲ್ ಗಾಂಧಿ ವಯನಾಡಿಗೆ ಹೋಗಿದರೆ ಆ ಕ್ಷೇತ್ರದವರು ಪ್ರಶ್ನೆ ಮಾಡಿಕಕೊಳ್ಳಲಿ , ನಾನು ಮಂಡ್ಯ ಜಿಲ್ಲೆಯವನು ಅದಕ್ಕೆ ಹೇಳ್ತಿದಿನಿ ಎಂದು ಸ್ಪಷ್ಟಿಕರಣ ನೀಡಿದರು. 
ಮುಂದಿನ ಚುನಾವಣೆಗೆ ಮಂಡ್ಯ ಜೆಡಿಎಸ್ ನಲ್ಲಿ ಯಾರಾದರೂ ಬಲಿಯಾಗುತ್ತಾರೆ ಅಷ್ಟೇ.ಕುಮಾರಸ್ವಾಮಿ ಒಂಥರ ಇಂಗ್ಲಿಷ್ ನವರು ಇದ್ದಂಗೆ, ಗಂಟು ಮೂಟೆ ಕಟ್ಟಿಕೊಂಡು ಹೊರಟರೆ ಬರ್ತಾಯಿರೋದೆಯ ! ಮಂಡ್ಯದವರು ಗಂಡಸರಲ್ಲವಾ ? ತೆಳ್ಳಗೆ, ಬೆಳ್ಳಗೆ ಅವರೇ ಅಂತ ಯಾರೇ ಬಂದರು ಮನೆಗೆ ಸೇರಿಸ್ಕೊಳಕ್ಕಾಗತ್ತಾ? ಮಂಡ್ಯದ ಎಲ್ಲಾ ಪಕ್ಷದವದರು ಕೈಗೆ ಬಳೆ ತೊಟ್ಕೊಳ್ಬೇಡಿರಾ ಕಣ್ರಪ್ಪ ಅಂತಿದಿನಿ ಎಂದು ಮಾಜಿ ಸಂಸದ ಶಿವರಾಮೇಗೌಡ ಪ್ರಶ್ನೆಗಳ ಸುರಿಮಳೆ ಸುರಿಸಿದರು .