ಮಂಡ್ಯ : ಸತತ ಮಳೆಗೆ ಕೋಡಿ ಬಿದ್ದ ಕೆರೆ ನೀರಿನಲ್ಲಿ ಬೈಕ್ ಸಮೇತ ಚಾಲಕ ಕೊಚ್ಚಿ ಹೋದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಣೆಚೆನ್ನಾಪುರ ಗ್ರಾಮದ ಮಾಯಣ್ಣಗೌಡ(67) ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ ಮಾಯಣ್ಣಗೌಡ ಬೈಕ್ ನಲ್ಲಿ ತೆರಳುವ ವೇಳೆ ಆಣೆಚೆನ್ನಾಪುರ ಗ್ರಾಮದ ಬಳಿ ಕೆರೆ ಕೋಡಿ ಬಿದ್ದು ನೀರು ರಸ್ತೆ ಮೇಲೆ ರಭಸವಾಗಿ ಹರಿಯುತ್ತಿದ್ದು, ಈ ದರ್ಘಟನೆ ಸಂಭವಿಸಿದೆ. ರಸ್ತೆ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದರೂ ಲೆಕ್ಕಿಸದೆ ಬೈಕ್ ನಲ್ಲಿ ತೆರಳಿದ್ದ ವ್ಯಕ್ತಿ, ಬೈಕ್ ಸಮೇತ ಕೊಚ್ಚಿ ಹೋಗಿದ್ದಾರೆ.
ಘಟನೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ, ಮರತದೇಹವನ್ನ ಪತ್ತೆಹಚ್ಚಿದ್ದಾರೆ. ಈ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.