ಉಡುಪಿ - ಉಡುಪಿ ಭಾಗದಲ್ಲಿ ಹಿಜಾಬ್ ವಿವಾದ ಭಾರೀ ಸದ್ದು ಮಾಡಿತು. ಈಗ ಕಾರ್ತಿಕ ಮಾಸ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಬಹುತೇಕ ಎಲ್ಲ ದೇಗುಲಗಳಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಆದರೆ , ವೆಂಕಟರಮಣ ದೇಗುಲದ ಲಕ್ಷ ದೀಪೋತ್ಸವ ಕಾರ್ಯಕ್ರಮ ವಿಚಾರವಾಗಿ ಮತ್ತೆ ವಿವಾದ ತಲೆ ಎತ್ತಿದೆ.
ಈ ಲಕ್ಷ ದೀಪೋತ್ಸವದಲ್ಲಿ ಅನ್ಯಧರ್ಮೀಯರು ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಆರೋಪ ಮಾಡಿ ಈಗ ಚರ್ಚೆ ನಡೆದಿದೆ. ಈ ಸಂಬಂದ ಪೊಲೀಸ್ ವರಿಷ್ಟಾಧಿಕಾರಿವರೆಗೂ ದೂರು ದಾಖಲಾಗಿದೆ. ಸದ್ಯ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಸುಮೋಟೊ ಕೇಸ್ ಸಹ ದಾಖಲಿಸಲಾಗಿದೆ.