2 ತಿಂಗಳಿಂದ ಗೃಹಲಕ್ಷ್ಮೀ ಯೋಜನೆ ಹಣ ವಿಳಂಬ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. 2 ತಿಂಗಳಿಂದ ಹಣ ಪಾವತಿ ಲೇಟ್ ಆಗಿರೋದು ಸತ್ಯ, 4-5 ದಿನಗಳಲ್ಲಿ ಸಮಸ್ಯೆ ಪರಿಹಾರ ಮಾಡ್ತೀನಿ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಪಚುನಾವಣೆ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಹಾಕಿಲ್ಲ ಅಷ್ಟೇ, ಕಳೆದ 14 ತಿಂಗಳು ಏನು ಎಲೆಕ್ಷನ್ ಇರಲಿಲ್ಲ, ಸರಿಯಾಗಿಯೇ ಹಣ ಹಾಕಿದ್ದೇವೆ, ಇತ್ತೀಚೆಗೆ ಬೈಎಲೆಕ್ಷನ್ ಇದ್ದ ಹಿನ್ನೆಲೆ ಹಣ ಹಾಕಿರಲಿಲ್ಲ, ಚುನಾವಣೆ ಸಮಯದಲ್ಲಿ ಮಾತ್ರ ಹಣ ಹಾಕಿದ್ದೇವೆ ಅಷ್ಟೇ ಅಂತಾರೆ, ಆರೋಪ ಮಾಡೋರು ಏನೇ ಮಾಡಿದ್ರು ಆರೋಪ ಮಾಡ್ತಾರೆ ಎಂದಿದ್ದಾರೆ.
ಇದೀಗ ಚುನಾವಣೆ ಮುಗಿದೆ, 4-5 ದಿನಗಳಲ್ಲಿ ಸಮಸ್ಯೆ ಪರಿಹಾರ ಮಾಡ್ತೀನಿ ಅಂತಾ ಮಹಿಳೆಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್‌ನ್ಯೂಸ್ ನೀಡಿದ್ದಾರೆ.