ಬೆಳಗಾವಿಯಲ್ಲಿ ಬಾಣಂತಿಯರು, ಹಸುಗೂಸುಗಳು ಸಾವನ್ನಪ್ಪಿರುವ ಪ್ರಕರಣದ ಬಗ್ಗೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ ಅಧಿಕಾರಿಗಳ ಬಳಿ ಮಾತನಾಡಿದ್ದೇ.ಈ ಬಗ್ಗೆ ಒಂದು ಗಂಟೆ ಇಂದು ಚರ್ಚೆ ಮಾಡಿದ್ದೇನೆ..ಯಾವ್ಯಾವ ಕಾರಣಕ್ಕೆ ಹಸುಗುಸುಗಳು ತೀರಿಕೊಂಡಿವೆ..ಯಾಕೆ ಬಾಣಂತಿಯರಿಗೆ ಸಮಸ್ಯೆಯಾಗಿದೆ ಎಲ್ಲವನ್ನೂ ಕೂಡ ಚರ್ಚೆ ಮಾಡಿದ್ದೇನೆ..ಸಾವನ್ನ ಪ್ರಿವೆಂಟ್ ಮಾಡಲು ಏನೆಲ್ಲ ಮಾಡಬೇಕು ಅದನ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಅಲ್ಲದೇ ಬಳ್ಳಾರಿ ಪ್ರಕರಣಕ್ಕೂ ಬಿಮ್ಸ್‌ಗೂ ಸಂಬಂಧ ಇಲ್ಲ. ಕಬ್ಬಿನಾಂಶ ಕೊರತೆ, ಪ್ರೀ ಮೆಚ್ಯುರ್ ಬೇಬಿ ಅಧಿಕಾರದ ಒತ್ತಡ ಹೀಗೆ ಅನೇಕ ಕಾರಣಗಳು ಇವೆ..ಒಂದು ಲಕ್ಷ ಜನ ಮಕ್ಕಳು ಹುಟ್ಟಿದರೆ 28 ಜನ ಅದರಲ್ಲಿ ತೀರಿಕೊಂಡಿದ್ದಾರೆ..ಅದಕ್ಕೆ ಇಂಥದ್ದೇ ಕಾರಣ ಅಂತ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.