ಕರ್ನಾಟಕ

ವಕೀಲರ ಮೇಲೆ ಹಲ್ಲೆ ಆರೋಪ..ತುಮಕೂರಿನಲ್ಲಿ ಲಾಯರ್ಸ್​ ಪ್ರೊಟೆಸ್ಟ್..!

ವಕೀಲರ ಮೇಲೆ ಹಲ್ಲೆ ಮಾಡಿದ್ದಕ್ಕೆ ತುಮಕೂರು ಜಿಲ್ಲಾ ವಕೀಲರ ಸಂಘದ ಕಚೇರಿ ಮುಂದೆ ನೂರಾರು ಜನ ವಕೀಲರು, ಪ್ರತಿಭಟನೆ ನಡೆಸಿದ್ದಾರೆ.

ವಕೀಲರೊಬ್ಬರ ಮೇಲೆ ಹಲ್ಲೆಯಾಗಿದ್ದಕ್ಕೆ ಪೊಲೀಸ್ ಇನ್ ಸ್ಪೆಕ್ಟರ್ ವಿರುದ್ಧ, ಕಾನೂನು ಕ್ರಮ ಕೈಗೊಳ್ಳುವಂತೆ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ತುಮಕೂರು ನಗರ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ದಿನೇಶ್ ವಿರುದ್ಧ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಪ್ರತಿಭಟನೆ ನಡೆಸಿದ್ದಾರೆ. ತುಮಕೂರು ಜಿಲ್ಲಾ ವಕೀಲರ ಸಂಘದ ಕಚೇರಿ ಮುಂದೆ ನೂರಾರು ಜನ ವಕೀಲರು, ಪ್ರತಿಭಟನೆ ನಡೆಸಿದ್ದಾರೆ