ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸುರುಗೆನಹಳ್ಳಿ ಗ್ರಾಮದ ಕುರಿ ರೊಪ್ಪದ ಮೇಲೆ ಚಿರತೆ ದಾಳಿ ನಡೆದಿದ್ದು, ಒಂಭತ್ತು ಕುರಿಗಳು ಬಲಿಯಾಗಿವೆ. ಕೃಷ್ಣಪ್ಪ ಎಂಬುವರಿಗೆ ಸೇರಿದ ಕುರಿ ಕೊಪ್ಪದ ಹದಿನೈದು ಕುರಿಗಳ ಮೇಲೆ ದಾಳಿ ನಡೆದಿದ್ದು, 9 ಕುರಿಗಳು ಸಾವನ್ನಪ್ಪಿದ್ದು ಇನ್ನು ಏಳು ಕುರಿಗಳು ಗಾಯಗೊಂಡಿವೆ. ಚಿರತೆ ದಾಳಿಯಿಂದ ರೈತ ಕೃಷ್ಣಪ್ಪಗೆ ಸುಮಾರು 1 ಲಕ್ಷ ನಷ್ಟವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಹಾರ ಕೊಡುವಂತೆ ಅಧಿಕಾರಿಗಳ ಬಳಿ ರೈತ ಕೃಷ್ಣಪ್ಪ ಮನವಿ ಮಾಡಿದ್ದಾರೆ.