ತುಮಕೂರು : ಅನಿರೀಕ್ಷಿತವಾಗಿ ಬಂದ ನನ್ನನ್ನು ತುಮಕೂರಿನ ಜನತೆ ಲಕ್ಷಾಂತರ ಮತಗಳಿಂದ ಗೆಲ್ಲಿಸಿದರು. ತುಮಕೂರಿಗೆ ಮಾಡಬೇಕಾದ ಕೆಲಸ ತುಂಬಾ ಇದೆ. ಇನ್ನೂ ಎರಡು ಮೂರು ತಿಂಗಳಲ್ಲಿ ಹಲವಾರು ಯೋಜನೆಗಳನ್ನ ತರುತ್ತೇನೆ ಎಂದು ಕೇಂದ್ರ ರೈಲ್ವೆ ಜಲ ಶಕ್ತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಸೋಮಣ್ಣ, ನನಗೂ ತುಂಬಾ ಶತ್ರುಗಳಿದ್ದಾರೆ. ಅವನ್ನೆಲ್ಲಾ ನೋಡಿಕೊಂಡು ನನ್ನ ಅನುಭವ ಬಳಸುತ್ತೇನೆ. ಎಲ್ಲಾ ಸಂಸದರು ಕೇಂದ್ರದ ಜೊತೆ ಕೈಜೊಡಿಸಿದ್ರೆ ಏನು ಬೇಕಾದರೂ ಮಾಡಬಹುದು. ಹೊಸ ತುಮಕೂರು ಮಾಡೋಣ ಎಲ್ಲರೂ ಕೈ ಜೊಡಿಸಿ ಹೆಚ್ಚು ಅಭಿವೃದ್ಧಿ ಮಾಡೋಣ ಎಂದರು.