ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಮದ್ಯಾಸುರನ ಪ್ರತಿಕೃತಿಗೆ ಶವಯಾತ್ರೆ ಮಾಡಲಾಗಿದೆ. ಗ್ರಾಮದ ಮಧ್ಯಭಾಗ ಮದ್ಯಾಸುರನ ಪ್ರತಿಕೃತಿ ದಹಿಸಿ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.
ಧರ್ಮಸ್ಥಳ ಸಂಘ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಮದ್ಯವರ್ಜನ್ಯ ಶಿಬಿರದಲ್ಲಿ, ಶಿಬಿರಾರ್ಥಿಗಳಿಂದ ನಡೆದ ಈ ಕಾರ್ಯಕ್ರಮ ವಿನೂತನವಾಗಿ ಪ್ರದರ್ಶನವಾಗಿದೆ. ನಾವು ಮತ್ತೆಂದೂ ದುಶ್ಚಟಗಳಿಗೆ ಬಲಿಯಾಗುವುದಿಲ್ಲ ಎಂದು ಮದ್ಯಾಸುರನ ಶವಯಾತ್ರೆ ನಡೆಸಿ ಪ್ರತಿಜ್ಞೆ ಮಾಡಲಾಗಿದೆ.