ಮಂಗಳ ಗ್ರಹದ ಹಿಮಾವೃತ ಭಾಗಗಳಲ್ಲಿ ಅಂದರೆ ಮಂಜುಗಡ್ಡೆಯ ಕೆಳಗೆ ಅನ್ಯಗ್ರಹ ಜೀವಿಗಳು ಇರಬಹುದು ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ವಿಜ್ಞಾನಿಗಳು ನಡೆಸಿದ ಹೊಸ ಅಧ್ಯಯನದ ಪ್ರಕಾರ ಮಂಜುಗಡ್ಡೆ ಇರುವ ಸ್ಥಳದಲ್ಲಿ ದ್ಯುತಿಸಂಶ್ಲೇಷಣೆಯಂತಹ ಪ್ರಕ್ರಿಯೆಯು ಅಲ್ಲಿ ನಡೆಯುತ್ತಿದೆ ಹಾಗಾಗಿ ಅಲ್ಲಿ ಜೀವಿಗಳು ಇರಬಹುದು ಎಂದು ಊಹಿಸಿದ್ದಾರೆ.
ದ್ಯುತಿಸಂಶ್ಲೇಷಣೆಯು ಸಸ್ಯಗಳು, ಪಾಚಿ ಮತ್ತು ಸೈನೋಬ್ಯಾಕ್ಟೀರಿಯಾಗಳು ರಾಸಾಯನಿಕ ಶಕ್ತಿಯನ್ನು ಉತ್ಪಾದಿಸುವ ಪ್ರಕ್ರಿಯೆಯಾಗಿದೆ. ಇದಕ್ಕೆ ಬೇಕಾಗಿರುವುದು ನೀರು ಮತ್ತು ಸೂರ್ಯನ ಬೆಳಕು ಮಾತ್ರ. ಭೂಮಿಯ ವಾತಾವರಣದಲ್ಲಿ ಹೆಚ್ಚಿನ ಆಮ್ಲಜನಕವನ್ನು ಇಲ್ಲಿಂದ ಉತ್ಪಾದಿಸಲಾಗುತ್ತದೆ. ಆದರೆ ಹೊಸ ಅಧ್ಯಯನದ ಪ್ರಕಾರ, ಮಂಗಳ ಗ್ರಹದ ಧ್ರುವಗಳ ಬಳಿ ದಪ್ಪವಾದ ಮಂಜುಗಡ್ಡೆಯ ಹಾಳೆ ಇದೆ. ಅದರ ಅಡಿಯಲ್ಲಿ ಜೀವನ ಇರಬಹುದು ಎಂಬುವುದು ವಿಜ್ಞಾನಿಗಳ ಅಭಿಪ್ರಾಯ.
ನಾಸಾ ವಿಜ್ಞಾನಿಗಳು ಹೇಳಿದ್ದೇನು?
ನಾಸಾ ವಿಜ್ಞಾನಿಗಳಾದ ಮಾರ್ಸ್ ಆರ್ಬಿಟರ್, ಪರ್ಸಿವೆರೆನ್ಸ್ ರೋವರ್, ಮಾರ್ಸ್ ಸ್ಯಾಂಪಲ್ ರಿಟರ್ನ್ ಮತ್ತು ಎಕ್ಸೋಮಾರ್ಸ್ ಬಾಹ್ಯಾಕಾಶ ನೌಕೆಯಿಂದ ಡೇಟಾವನ್ನು ವಿಶ್ಲೇಷಿಸಿ. ಇದರ ಆಧಾರದ ಮೇಲೆ ವರದಿಯನ್ನ ರಚಿಸಲಾಗಿದೆ. ಮಂಗಳ ಗ್ರಹಕ್ಕೆ ಹೋಗಿ ಮಂಜುಗಡ್ಡೆಯ ಕೆಳಗೆ ತನಿಖೆ ಮಾಡುವ ಮೂಲಕ ಮಾತ್ರ ಇದನ್ನು ದೃಢೀಕರಿಸಬಹುದು ಎಂದು ಹೇಳಿದ್ದಾರೆ.
ನಾಸಾ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಸಂಶೋಧಕ ಮತ್ತು ಸಹವರ್ತಿ ಆದಿತ್ಯ ಖುಲ್ಲರ್, ನಾವು ಮಂಗಳ ಗ್ರಹದಲ್ಲಿ ಜೀವವನ್ನು ಕಂಡುಕೊಂಡಿದ್ದೇವೆ ಎಂದು ಹೇಳುತ್ತಿಲ್ಲ. ಆದರೆ ಮಂಗಳ ಗ್ರಹದ ಧೂಳಿನ ಶುಷ್ಕ ಹಿಮಾವೃತ ಹಾಳೆಗಳ ಕೆಳಗೆ ಜೀವವಿದೆ ಎಂದು ನಾವು ನಂಬುತ್ತೇವೆ. ಇದನ್ನು ಭವಿಷ್ಯದಲ್ಲಿ ತನಿಖೆ ಮಾಡಬಹುದು ಎಂದು ತಿಳಿಸಿದ್ದಾರೆ.