ಕರ್ನಾಟಕ

ಕೆ.ಸಿ ಜನರಲ್‌ ಆಸ್ಪತ್ರೆಗೆ ʼಲೋಕಾʼ ಶಾಕ್..ಖುದ್ದು ರೋಗಿಗಳ ಬಳಿಯೇ ಪರಿಶೀಲನೆ..!

ಬೆಂಗಳೂರಿನ ಕೆ.ಸಿ ಜನರಲ್‌ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್‌ ದಾಳಿ ಮಾಡಿ, ಶಾಕ್‌ ನೀಡಿದ್ದಾರೆ.

ಬೆಂಗಳೂರಿನ ಕೆ.ಸಿ ಜನರಲ್‌ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್‌ ದಾಳಿ ಮಾಡಿ, ಶಾಕ್‌ ನೀಡಿದ್ದಾರೆ. ಆಸ್ಪತ್ರೆ ಪರಿಶೀಲನೆ ಮಾಡಲು ಮುಖ್ಯ ಲೋಕಾಯುಕ್ತ ಬಿ.ಎಸ್.ಪಾಟೀಲ್, ಉಪಲೋಕಾಯುಕ್ತರಾದ ನ್ಯಾ.ಪಣೀಂದ್ರ, ನ್ಯಾ.ಬಿ.ವೀರಪ್ಪ ಭೇಟಿ ನೀಡಿದ್ದಾರೆ.

ಆಸ್ಪತ್ರೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ದಾಳಿ ಮಾಡಿದ ಅಧಿಕಾರಿಗಳು, ಆಸ್ಪತ್ರೆ ಸ್ವಚ್ಛತೆ , ರೋಗಿಗಳಿಗೆ ಸಿಗುತ್ತಿರುವ ಸೌಲಭ್ಯ, ಚಿಕಿತ್ಸೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಖುದ್ದು ರೋಗಿಗಳ ಬಳಿಯೇ ಸಮಸ್ಯೆ ಆಲಿಸಿದ್ದಾರೆ. 3 ತಂಡಗಳಾಗಿ ಆಸ್ಪತ್ರೆಯ ಪ್ರತಿಯೊಂದು ವಾರ್ಡ್ ಗಳಿಗೆ ಭೇಟಿ  ನೀಡಿದ್ದಾರೆ. ಈ ವೇಳೆ ರೋಗಿಗಳು ಆಸ್ಪತ್ರೆ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡಿದ್ದಾರೆ.

ರೋಗಿಗಳ ಆರೋಪವೇನು..?

ಆಸ್ಪತ್ರೆಯಲ್ಲಿ ರೋಗಿಗಳು 100, 200 ಕೊಟ್ರೆ ಯಾರೂ ತಗೋಳೋದಿಲ್ಲವಂತೆ. 500 ಕೊಟ್ರೆ ಮಾತ್ರ ಮಾತಾಡಿಸ್ತಾರೆ. ಇಲ್ಲ ಅಂದ್ರೆ ತಾಯಿ ಕಾಡ್೯ ಕ್ಯಾನ್ಸಲ್  ಮಾಡ್ತೀವಿ ಅಂತ ಹೆದರಿಸುತ್ತಾರೆ ಎಂಬ ಆರೋಪ ಮಾಡಿದ್ದಾರೆ. ಅಲ್ಲದಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಹೆರಿಗೆ ಮಾಡಬೇಕು ಅಂದ್ರೂ ದುಡ್ಡು ಕೊಡಬೇಕು. ಮಿನಿಮಮ್ 500 ರೂಪಾಯಿ ಕೊಟ್ರೆ ಮಾತ್ರ ಚಿಕಿತ್ಸೆ ಕೊಡ್ತಾರೆ. ದುಡ್ಡು ಕೊಡಲಿಲ್ಲ ಅಂದ್ರೆ ತಾಯಿ ಕಾರ್ಡು ಕಿತ್ತು ಇಟ್ಟುಕೊಳ್ಳುತ್ತಾರೆ. ಜೊತೆಗೆ ನರ್ಸ್‌ ಮತ್ತು ವಾರ್ಡನ್ ಗಳಿಂದಲೂ ಕಿರುಕುಳ ಎಂದಿದ್ದಾರೆ ರೋಗಿಗಳು.ಅಲ್ಲದೇ ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಕೂಡ ನೀಡಲಾಗಿದೆ.