ಹಾಸನ : ಬಿಎಸ್ಎನ್ಎಲ್ ಟವರ್ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಆನೆ ಮೃತಪಟ್ಟಿರುವ ಘಟನೆ ಹಾಸನ ತಾಲೂಕಿನ ಬನವಾಸೆ ಗ್ರಾಮದ ಬಳಿ ನಡೆದಿದೆ. 25 ವರ್ಷದ ಒಂಟಿಸಲಗ ಕರೆಂಟ್ ಶಾಕ್ ನಿಂದ ಸಾವಿಗೀಡಾಗಿದೆ.
ಕಾಡಿನಿಂದ ನಾಡಿಗೆ ಆಹಾರವನ್ನ ಅರಸಿ ಬಂದಿದ್ದ ಒಂಟಿ ಸಲಗ ದುರಾದೃಷ್ಟವಶಾತ್ ವಿದ್ಯತ್ ಸ್ಪರ್ಶಿಸಿ ಸಾವನ್ನಪ್ಪಿದೆ. ವಿದ್ಯುತ್ ತಂತಿಗೆ ಆನೆಯ ಸೊಂಡಿಲು ತಾಗಿ ಮೃತಪಟ್ಟಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.