ಕರ್ನಾಟಕ

ಹೊಸ ಬಟ್ಟೆ ಅಂಗಡಿ ಮುಂದೆ ಮಂಗಳಮುಖಿಯರ ರಂಪಾಟ..!

ರಾಜಧಾನಿ ಬೆಂಗಳೂರಲ್ಲಿ ಶುಭ ಕಾರ್ಯಕ್ರಮ ಬಂದ್ರೆ ಜನರಿಗೆ ಭಯ, ಆತಂಕ ಹೆಚ್ಚಾಗೋಕೆ ಮಂಗಳಮುಖಿಯರು ಕಾರಣರಾಗುತ್ತಿದ್ದಾರೆ.

ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ಶುಭ ಕಾರ್ಯಕ್ರಮ ಬಂದ್ರೆ ಜನರಿಗೆ ಭಯ, ಆತಂಕ ಹೆಚ್ಚಾಗೋಕೆ ಮಂಗಳಮುಖಿಯರು ಕಾರಣರಾಗುತ್ತಿದ್ದಾರೆ. ಅದ್ಯಾಕೆ ಅಂದ್ರೆ ಮನೆ, ಆಫೀಸ್, ಶಾಪ್ ಮುಂದೆ ಹಬ್ಬದ ವಾತಾವರಣವಿದ್ರೆ ಮಂಗಳಮುಖಿಯರು ಎಂಟ್ರಿ ಕೊಡ್ತಾರೆ. ವಿಜಯನಗರದ ಹಂಪಿ ನಗರದಲ್ಲಿ ಬಟ್ಟೆ ಅಂಗಡಿ ಉದ್ಘಾಟನೆಗೆಂದು ಅಂಗಡಿ ಮಾಲೀಕ ಹೋಮಹವನ ಮಾಡಿಸುತ್ತಿದ್ದರು. ಪೂಜೆ ಸಮಯಕ್ಕೆ ಮಂಗಳಮುಖಿಯರು ಎಂಟ್ರಿ ಕೊಟ್ಟು 10 ಸಾವಿರ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಆದ್ರೆ ಅಂಗಡಿ ಮಾಲೀಕ ಮಂಗಳಮುಖಿಯರಿಗೆ ಎರಡು ಸಾವಿರ ಕೊಟ್ಟಿದ್ದಾನೆ. 10 ಸಾವಿರ ರೂ‌ ಕೊಡದೇ ಇದ್ದಕ್ಕೆ ದಬ್ಬಾಳಿಕೆ ಮಾಡಿದ್ದಾರೆ. ಅಷ್ಟೆಅಲ್ಲಾ ಅಂಗಡಿ ಮಾಲೀಕ ಹಾಗೂ ಕುಟುಂಬ ಸದಸ್ಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿಹಲ್ಲೆಗೆ ಯತ್ನಿಸಿ ಅಂಗಡಿ ಮುಂದೆ ರಂಪಾಟ ಮಾಡಿದ್ದಾರೆ ಎಂದು ಆರೋಪಿಸಿ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.