ಕರ್ನಾಟಕ

ಲಾರಿ ಆ್ಯಕ್ಸಿಡೆಂಟ್..ಡ್ರೈವರ್ & ಕ್ಲೀನರ್​ ಸಾವು..!

ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದು ಮತ್ತೊಂದು ಲಾರಿ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ.

ಸಕ್ಕರೆನಾಡು ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದು ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಡ್ರೈವರ್ ಹಾಗೂ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮಂಡ್ಯ ಹೊರವಲಯದ ಬೆಂಗಳೂರು-ಮೈಸೂರು ನೂತನ ಹೈವೇನಲ್ಲಿ ಘಟನೆ ನಡೆದಿದೆ. 

ಲಾರಿ ಚಾಲಕ ಸೈಯದ್ ಮಂಡಲ್, ಕ್ಲೀನರ್ ಸಿರಾಜುದ್ದೀನ್ ಮೃತ ದುರ್ದೈವಿಗಳು ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಲಾರಿ ಸಂಪೂರ್ಣ ಜಖಂ ಆಗಿದೆ. ಸ್ಥಳಕ್ಕೆ ಮಂಡ್ಯ ಸೆಂಟ್ರಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ