ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ನೇಪಾಳ ಮೂಲದ ಇಬ್ಬರು ಆರೋಪಿಗಳನ್ನ ಬಂಧಿಸಿದ ಬಳಿಕ ಕೊಲೆ ಕೇಸ್ ನಲ್ಲಿ ಲವ್ ಕಹಾನಿ ಬೆಳಕಿಗೆ ಬಂದಿದೆ.
ಮೃತ ಬಿಕ್ರಂ ಸಿಂಗ್ ಮತ್ತು ಆರೋಪಿ ಇಬ್ಬರೂ ನೇಪಾಳಿ ಮೂಲದ ಒಂದೇ ಯುವತಿ ಜೊತೆ ಲವ್ವಿ ಡವ್ವಿ ನಡೆದಿತ್ತು.. ನೇಪಾಳ ಮೂಲದ ಆರೋಪಿ ಮತ್ತು ಮೃತ ಬಿಕ್ರಂ ಸಿಂಗ್, ಇಬ್ಬರು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು.. ಇಬ್ಬರೂ ಓರ್ವ ಯುವತಿಗೆ ಮೆಸೇಜ್ ಮಾಡೋದು, ಮಾತಾಡೋದು ಮಾಡ್ತಿದ್ರು.. ಹೀಗೆ ಇಬ್ಬರ ನಡುವೆ ನನ್ನ ಹುಡುಗಿ ನನ್ನ ಹುಡುಗಿ ಅಂತ ಆಗಾಗ ಕಿತ್ತಾಡ್ತಿದ್ರು.. ಆದ್ರೆ ಅಶ್ಲೀಲವಾಗಿ ಬಿಕ್ರಂ ಯುವತಿಗೆ ಮೆಸೇಜ್ ಮಾಡ್ತಿದ್ದ ಎಂಬ ಮಾಹಿತಿ ತನಿಖೆಯಲ್ಲಿ ತಿಳಿದು ಬಂದಿದೆ..
ಕಳೆದೆರಡು ದಿನಗಳ ಹಿಂದೆ ಮೃತ ಬಿಕ್ರಂ ಸಿಂಗ್ ಸ್ನೇಹಿತ ತೂರಿ ಎಂಬಾತನನ್ನ ಕರೆದೊಯ್ದು ಪಾರ್ಟಿ ಮಾಡಿದ್ದ. ಇದೇ ವೇಳೆ ಬಿಕ್ರಂ ಸಿಂಗ್ ಬಳಿ ಬಂದಿದ್ದ ಕೊಲೆ ಆರೋಪಿ ಮಾರಣಾಂತಿಕ ವಾಗಿ ಹಲ್ಲೆ ಮಾಡಿ, ಟೈಲ್ಸ್ ಕಲ್ಲಿನಿಂದ ಬಿಕ್ರಂ ಗೆ ಚುಚ್ಚಿದ್ದಾನೆ. ತೀವ್ರ ರಕ್ತಸ್ರವಾವಾಗಿ ಬಿಕ್ರಂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಇವರ ಜಗಳ ಬಿಡಿಸಲು ಮುಂದಾಗಿದ್ದ ತೂರಿ ಎಂಬಾತನನ್ನು ಕೂಡಾ ಆರೋಪಿಗಳು ಕೊಲೆ ಮಾಡಿದ್ದಾರೆ.
ಎರಡು ಕೊಲೆ ಮಾಡಿದ್ರೂ ಗೊತ್ತೇ ಇಲ್ಲದಂತೆ ಹೋಟೆಲ್ ನಲ್ಲಿ ಕೆಲಸ ಮಾಡ್ತಿದ್ದ ಆರೋಪಿ ಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನು ಈ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸರಿಂದ ತನಿಖೆ ಮುಂದುವರೆದಿದೆ.