ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಬಲಿಯಾಗೇ ಆಗ್ತಾನೆ ಎಂದು, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಭವಿಷ್ಯ ನುಡಿದಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮಾತನಾಡಿದ ಅವರು, ನಿಖಿಲ್ ನ ಪ್ರತಿಷ್ಠಾಪನೆ ಮಾಡೋದಕ್ಕೆ ಆಗಲ್ಲ. ಯಡಿಯೂರಪ್ಪ ಬಂದ್ರು ಕೂಡ, ವಿಜಯೇಂದ್ರ ಅಲ್ಲೇ ಹೋಗಿ ಮಲ್ಕೊಂಡ್ರು. ಚನ್ನಪಟ್ಟಣ ಚುನಾವಣೆ ಗೆಲ್ಲೋಕೆ ಸಾಧ್ಯವೇ ಇಲ್ಲ. ಮಂಡ್ಯ ಜಿಲ್ಲೆಗೆ ಯಾಕೆ ಬರ್ತೀರಿ ಸ್ವಾಮಿ ನೀವು ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಬಾದಾಮಿಗೆ ಹೋಗಿದ್ರೆ ಅದನ್ನ ಅಲ್ಲಿ ಪ್ರಶ್ನೆ ಮಾಡಿಕೊಳ್ಳಲಿ. ರಾಹುಲ್ ಗಾಂಧಿ ವಯನಾಡಿಗೆ ಹೋಗಿದ್ರೆ ವಯನಾಡಿನವರು ಪ್ರಶ್ನೆ ಮಾಡಿಕೊಳ್ಳಲಿ. ನಾನು ಮಂಡ್ಯ ಜಿಲ್ಲೆಯವನು ಅದಕ್ಕೆ ಹೇಳ್ತಿದ್ದೀನಿ. ಮುಂದಿನ ಚುನಾವಣೆಗೆ ಮಂಡ್ಯ ಜೆಡಿಎಸ್ ನಲ್ಲಿ ಯಾರಾದರೂ ಬಲಿಯಾಗ್ತಾರೆ ಅಷ್ಟೇ. ಕುಮಾರಸ್ವಾಮಿ ಒಂತರ ಇಂಗ್ಲಿಷ್ ನವರು ಇದ್ದಂಗೆ, ಗಂಟು ಮೂಟೆ ಕಟ್ಟಿಕೊಂಡು ಹೊರಟ್ರೆ ಬರ್ತಾಯಿರೋದೇ ಎಂದು ವ್ಯಂಗ್ಯ ಮಾಡಿದ್ದಾರೆ.