ಮೈಸೂರು : ಸಿಎಂ ಸಿದ್ದರಾಮಯ್ಯರನ್ನು ಎರಡನೇ ಬಾರಿ ಸಿಎಂ ಮಾಡಿದ್ದು ವರುಣಾ ಜನ. ಸಿದ್ದರಾಮಯ್ಯ ಜನರ ಧ್ವನಿಯಾಗಿ ಆಡಳಿತ ಮಾಡುತ್ತಿದ್ದಾರೆ. ಸರ್ವಾಂಗೀಣ ಅಭಿವೃದ್ದಿ 15 ಬಜೆಟ್ ಮಂಡನೆ ಮಾಡಿದ್ದಾರೆ.
ಸ್ವಜನ ಪಕ್ಷಪಾತ ಭ್ರಷ್ಟಚಾರ ಮಾಡಿದವರಲ್ಲ. ಪ್ರಾಮಾಣಿಕತೆ, ನೈತಿಕತೆಯಿಂದ 4 ದಶಕ ರಾಜಕೀಯ ಮಾಡಿದ್ದಾರೆ. ಯಾವ ಜನರು ಸಿದ್ದಾಂತ ಇಲ್ಲದೆ, ತತ್ವ ಇಲ್ಲದೆ ಸೂರ್ಯನಿಗೆ ಉಗಿಯುವ ಕೆಲ್ಸ ಮಾಡ್ತಿದ್ದಾರೆ. ಆದ್ರೆ ಅದು ಸೂರ್ಯ ನಿಗೆ ತಲುಪಲ್ಲ, ಸಿದ್ದರಾಮಯ್ಯರನ್ನು ಸೂರ್ಯನಿಗೆ ಹೊಲಿಸಿ ಮಹದೇವಪ್ಪ ವಿಪಕ್ಷಳಿಗೆ ಟಾಂಗ್ ಕೊಟ್ಟಿದ್ದಾರೆ.

ವರುಣ ಕ್ಷೇತ್ರದ ಸಮಾರಂಭದಲ್ಲಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ಯಾವತ್ತೂ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮಾಡಿದವರಲ್ಲ. ಸೂರ್ಯ ನಿಗೆ ಉಗಿಯುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಸೂರ್ಯನಿಗೆ ಆ ಉಗುಳು ತಗಲುವುದಿಲ್ಲ. ಸೂರ್ಯನಿಗೆ ಅಪಮಾನ ಮಾಡುವ ಕೆಲಸ ಮಾಡಲಾಗುತ್ತಿದೆ. ಸಿದ್ದರಾಮಯ್ಯ ನಾಯಕತ್ವಕ್ಕೆ ಮಸಿ ಬಳಿದು ಸರಕಾರ ಅಸ್ಥಿರ ಮಾಡುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಧ್ವನಿ ಅಡಗಿದರೆ ಎಲ್ಲಾ ಶೋಷಿತ ಸಮುದಾಯಗಳ ಧ್ವನಿ ಅಡಗುತ್ತದೆ. ಹೀಗಾಗಿ ಸಿದ್ದರಾಮಯ್ಯರ ಧ್ವನಿ ಅಡಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಊರು ಊರನ್ನೆ ಲೂಟಿ ಮಾಡಿದವರು ಈಗ ಪ್ರಾಮಾಣಿಕ ಸಿದ್ದರಾಮಯ್ಯ ಬಗ್ಗೆ ಮಾತಾಡುತ್ತಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.