ದೇಶ

ಮಹಾಕುಂಭ ಮೇಳದ ದಿನಾಂಕ ವಿಸ್ತರಣೆ?: ವದಂತಿಗಳ ಬಗ್ಗೆ ಡಿಸಿ ಹೇಳಿದ್ದೇನು?

ಮಹಾಕುಂಭಮೇಳವು ವಿಸ್ತರಣೆ ಆಗಲಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ವಂದಂತಿಗಳು ಹರಡುತ್ತಿವೆ. ಆದರೆ, ಈ ಊಹಾ ಪೋಹಗಳ ಬಗ್ಗೆ ಪ್ರಯಾಗರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಮಂದರ್ ಸ್ಪಷ್ಟನೆ ನೀಡಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದ್ದು, ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನವನ್ನ ಮಾಡುತ್ತಿದ್ದಾರೆ. ಕುಂಭಮೇಳಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಹಿನ್ನೆಲೆ ಮಹಾಕುಂಭಮೇಳವನ್ನು ಪೂರ್ವ ನಿಗದಿತ ದಿನಾಂಕದಂದು ಮುಗಿಸದೇ, ವಿಸ್ತರಣೆ ಮಾಡಲಾಗುತ್ತಿದೆ ಎಂಬ ವದಂತಿಗಳೀಗ ಶುರುವಾಗಿವೆ.

ಜನವರಿ 13ರಂದು ಆರಂಭಗೊಂಡಿರುವ ಕುಂಭಮೇಕ್ಕೆ ಫೆಬ್ರವರಿ 26 ಮಹಾ ಶಿವರಾತ್ರಿ ದಿನದಂದು ತೆರೆ ಬೀಳಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿತ್ತು. ಆದರೀಗ ಮಹಾಕುಂಭಮೇಳವು ವಿಸ್ತರಣೆ ಆಗಲಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ವಂದಂತಿಗಳು ಹರಡುತ್ತಿವೆ. ಆದರೆ, ಈ ಊಹಾ ಪೋಹಗಳ ಬಗ್ಗೆ ಪ್ರಯಾಗರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಮಂದರ್ ಸ್ಪಷ್ಟನೆ ನೀಡಿದ್ದಾರೆ. ''ಕಾರ್ಯಕ್ರಮದ ವೇಳಾಪಟ್ಟಿಯನ್ನು ಧಾರ್ಮಿಕ ಮುಹೂರ್ತಗಳನ್ನು ಶುಭ ಸಮಯವನ್ನ ಆಧರಿಸಿ ನಿರ್ಧರಿಸಲಾಗುತ್ತದೆ ಹಾಗೂ ಅದರಲ್ಲಿ ಯಾವುದೇ ಬದಲಾಣೆ ಇಲ್ಲ ಸ್ಪಷ್ಟಪಡಿಸಿದ್ದಾರೆ.