ಮೈಸೂರು : ಮೈಸೂರಿನ ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮ ಪಂಚಾಯಿತಿಯ ಅಂಬೇಡ್ಕರ್ ಭವನದಲ್ಲಿ ಮಹಿಳೆಯರ ಕುಂದು ಕೊರತೆ ಬಗೆಹರಿಸಲು ಮಹಿಳಾ ಗ್ರಾಮ ಸಭೆಯನ್ನ ಕರೆಯಲಾಗಿತ್ತು. ಸಭೆಯಲ್ಲಿ ಆರೋಗ್ಯ ಗ್ರಾಮ, ಗ್ರಾಮ ನೈರ್ಮಲ್ಯ ತರಬೇತಿ ಆಯೋಜನೆಯನ್ನೂ ಮಾಡಲಾಗಿತ್ತು. ಅದ್ರೆ ಈ ಬಗ್ಗೆ ಗ್ರಾಮದ ಮಹಿಳೆಯರಿಗೆ ಮಾಹಿತಿ ನೀಡದೆ ಬಿಳಿಗೆರೆ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಗಣೇಶ್ ಹಾಗೂ ಕಾರ್ಯದರ್ಶಿ ಪುಟ್ಟರಾಜು ನಿಯಮಗಳನ್ನ ಗಾಳಿಗೆ ತೂರಿ ಸಭೆಯನ್ನ ಏರ್ಪಡಿಸಿದರು.
ಕೇವಲ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಹಿಳಾ ಗ್ರಾಮ ಸಭೆ ಸೀಮಿತವಾಗಿದೆ ಎಂದು ಮುಖಂಡರು ಪಿಡಿಓ ಹಾಗೂ ಕಾರ್ಯದರ್ಶಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಪಿಡಿಒ ಮತ್ತು ಕಾರ್ಯದರ್ಶಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜನಸಂಗ್ರಾಮ ಪರಿಷತ್ ಗೌರವಾಧ್ಯಕ್ಷ ನಗರ್ಲೆ ವಿಜಯ್ ಕುಮಾರ್ ಆಗ್ರಹಿಸಿದ್ದಾರೆ.