ಅಭಿಮಾನಿಗಳೇ ಆರ್‌ಸಿಬಿ ತಂಡದ ಮಾಲೀಕರಾಗುವ ಸಮಯ ಬಂದಿದೆ.. ಹೊಡಿಬಿಡಿ ಆಟಗಾರರ ಖರೀದಿಸದ RCB ವಿರುದ್ಧ ಫ್ಯಾನ್ಸ್ ಕೆರಳಿಕೆಂಡವಾಗಿದ್ದು ನಿಮಗೆ ಗೊತ್ತೇ ಇದೆ.. ಅಷ್ಟೇ ಅಲ್ಲ ಕನ್ನಡಗಿರ ಬಿಡ್ಡಿಂಗ್‌ಗೂ ಮ್ಯಾನೇಜ್‌ಮೆಂಟ್ ಹೇಗೆಲ್ಲಾ ವರ್ತಿಸಿದೆ ಅನ್ನೋದು ನೋಡಿದ್ದೀರಾ.. ಹೀಗಾಗಿ ರೆಬೆಲ್ ಆಗಿರುವ ಫ್ಯಾನ್ಸ್, ಆರ್‌ಸಿಬಿ ತಂಡವನ್ನೇ ಖರೀದಿಸಲು ಮುಂದಾಗಿದ್ದಾರೆ.. ಅದಕ್ಕಾಗಿ ಕ್ರೌಡ್ ಫಂಡಿಂಗ್‌ಗೆ ಕಾಲ್ ಮಾಡಲಾಗಿದ್ದು, ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ರೆ ನೀವು ಆರ್‌ಸಿಬಿಗೆ ಮಾಲೀಕರಾಗಬಹುದು..
ಐಪಿಎಲ್ ಆಕ್ಷನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬಿಡ್ಡಿಂಗ್ ನೋಡಿ ಮಂಡ್ಯ ಜಿಲ್ಲೆಯ ಮಳವಳ್ಳಿ ಆರ್ಸಿಬಿ ಅಭಿಮಾನಿಗಳು ಹೊಸ ಐಡಿಯಾ ಹುಡುಕಿದ್ದಾರೆ.. ಆರ್‌ಸಿಬಿ ರೆಡಿ ಮಾಡ್ತಿರೋ ಟೀಂ ನೋಡಿದ್ರೆ ಯಾವ ಕಾಲಕ್ಕೂ ಕಪ್ ಗೆಲ್ಲೋಕೆ ಆಗಲ್ಲ ಅಂತಾ ತಾವೇ ಆರ್‌ಸಿಬಿ ತಂಡ ಖರೀದಿಗೆ ಮುಂದಾಗಿದ್ದಾರೆ..
ಪ್ರತಿಯೊಬ್ಬ ಅಭಿಮಾನಿಯೂ 10 ಸಾವಿರ ದೇಣಿಗೆ ಕೊಟ್ಟರೆ ಸಾಕು.. 1000 ಕೋಟಿ ರೂಪಾಯಿಗೆ ತಂಡವನ್ನೇ ಖರೀದಿಸೋಣ.. ಬಳಿಕ ತಂಡವೂ ನಮ್ಮದೇ, ಕಪ್ ಕೂಡ ನಮ್ಮದೇ ಎಂದು ಬರೆಯಲಾಗಿದೆ.. ಈ ಪೋಸ್ಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ..
GFX; ವೈರಲ್ ಆದ ಪೋಸ್ಟರ್ನಲ್ಲಿ ಏನಿದೆ?
1. ಹಾಲಿ RCB ಮಾಲೀಕರಿಂದ ತಂಡವನ್ನು ಅಭಿಮಾನಿಗಳ ಸಂಘಕ್ಕೆ ಖರೀದಿ ಮಾಡುವ ಮಹತ್ವದ ಗುರಿ ಹೊಂದಲಾಗಿದೆ
2. 10 ಲಕ್ಷ ಅಭಿಮಾನಿಗಳಿಂದ ತಲಾ 10 ಸಾವಿರ ರೂ. ಹಣವನ್ನು ಶೇರಿನ ರೂಪದಲ್ಲಿ ಸಂಗ್ರಹಿಸುವ ಮೂಲಕ 1000 ಕೋಟಿ ಹಣ ಸಂಗ್ರಹಿಸುವ ಗುರಿ ಇದೆ..
3. ಸಂಗ್ರಹವಾದ ಹಣದಿಂದ RCB ತಂಡದ ಮಾಲೀಕತ್ವವನ್ನು ಅಭಿಮಾನಿಗಳ ಸಂಘವೇ ಖರೀದಿಸಿ ತಂಡದಲ್ಲಿ ಯಾವ್ಯಾವ ಆಟಗಾರರನ್ನು ಆಡಿಸಬೇಕೆಂಬುದನ್ನು ಅಭಿಮಾನಿಗಲೇ ವೋಟ್ ಮೂಲಕ ಆಯ್ಕೆ ಮಾಡಿ ಅಂತಹ ಆಟಗಾರರನ್ನು ನಿಯಮದಂತೆ ಬಿಡ್ಡಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳುವುದೇ ಸಂಘದ ಉದ್ದೇಶ
4. ಅಭಿಮಾನಿಗಳ ಸಂಘದ 1 ಲಕ್ಷ ಸದಸ್ಯರಲ್ಲಿ 10 ಮಂದಿಯನ್ನು 2 ವರ್ಷಕ್ಕೊಮ್ಮೆ ಚುನಾವಣೆಯ ಮೂಲಕ ಆಯ್ಕೆ ಮಾಡಿ ಬಿಡ್ಡಿಂಗ್‌ನಲ್ಲಿ ತಂಡವನ್ನು ಆಯ್ಕೆ ಮಾಡುವ ಅಧಿಕಾರ
5. ಸಂಘದ ಪ್ರತಿ ಸದಸ್ಯರಿಗೂ ಒಂದು ಬಾರಿ RCB ಆಡುವ ಯಾವುದಾದರೂ ಪಂದ್ಯವನ್ನು ವೀಕ್ಷಿಸಲು ಉಚಿತವಾಗಿ ಅವಕಾಶ