ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಂಗ್ಲಾ ಪ್ರಜೆಗಳಿಗೆ ಅಕ್ರಮವಾಗಿ ಐಡಿ ಕಾರ್ಡ್ ಮಾಡಿಕೊಡುವ ದಂಧೆ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಬೆಂಗಳೂರು ಹೊರ ವಲಯದಲ್ಲಿ ಈ ದಂಧೆ ನಡೆಸುತ್ತಿದ್ದ ಆರೋಪಿಯೊಬ್ಬ ಅರೆಸ್ಟ್ ಆಗಿದ್ದಾನೆ.
ಆನೇಕಲ್ ಬಳಿಯ ಸೂರ್ಯಸಿಟಿ ಬಳಿ ಈ ಆಸಾಮಿ ಕೇವಲ 8 ಸಾವಿರ ರೂಪಾಯಿ ಕೊಟ್ಟರೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ರೇಡ್ ಮಾಡಿದ ಪೊಲೀಸರು, ಹಲವಾರು ಆಧಾರ್ ಕಾರ್ಡ್ ಗಳನ್ನು ಕಂಡು ಶಾಕ್ ಆಗಿದ್ದಾರೆ. ವಿವಿಧ ನಕಲಿ ದಾಖಲಾತಿಗಳನ್ನೂ ತಯಾರಿಸಿ ಕೊಡುತ್ತಿದ್ದ ಆರೋಪಿ ಅರ್ನಾಬ್ ಮಂಡಲ್ ಎಂಬುವನನ್ನು ಬಂಧಿಸಿದ್ದಾರೆ.
ಮಾಹಿತಿ ಪ್ರಕಾರ ಈತ ಬಾಂಗ್ಲಾ ಪ್ರಜೆಗಳಿಗೆ ಮಾತ್ರ ಸ್ಥಳೀಯ ದಾಖಲೆಗಳನ್ನ ಪಡೆದು ಅನಂತರ ಆಧಾರ್ ಕಾರ್ಡ್ ಕೊಡ್ತಿದ್ದ ಎನ್ನಲಾಗಿದೆ. ಸದ್ಯ ಪೊಲೀಸರಿಗೆ ಎದುರಾಗಿರುವ ದೊಡ್ಡ ಸವಾಲೇನಂದ್ರೆ, ಈತನ ಬಳಿ ಆಧಾರ್ ಕಾರ್ಡ್ ಪಡೆದ ಬಾಂಗ್ಲಾ ಪ್ರಜೆಗಳನ್ನು ಪತ್ತೆ ಹಚ್ಚುವುದಾಗಿದೆ.