ನ್ಯೂ ಇಯರ್ ಸೆಲೆಬ್ರೇಷನ್‌ಗಾಗಿ ಕುಡಿಯಲು ಹಣ ಕೊಡದ ಹಿನ್ನೆಲೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ, ಮೈಸೂರು ಜಿಲ್ಲೆ ನಂಜನಗೂಡಿನ ಸರಸ್ವತಿ ಕಾಲೋನಿಯಲ್ಲಿ ನಡೆದಿದೆ. ಆಗಲೇ ಎಣ್ಣೆ ಮತ್ತಿನಲ್ಲಿದ್ದ ವ್ಯಕ್ತಿ, ನಡು ರಸ್ತೆಯಲ್ಲೇ ಮತ್ತೊಬ್ಬ ವ್ಯಕ್ತಿಯ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಮೃತ ದುರ್ದೈವಿಯನ್ನು ಮಹದೇವನಗರದ ರಫೀಕ್ ಎಂದು ಗುರುತಿಸಲಾಗಿದೆ.
ಹೊಸವರ್ಷದ ಮೊದಲ ದಿನ ರಫೀಕ್ ಸರಸ್ವತಿ ಕಾಲೋನಿಯಲ್ಲಿ ತಮ್ಮ ಮನೆಗೆ ತಡರಾತ್ರಿಯಲ್ಲಿ ನಡೆದು ಹೋಗುತ್ತಿದ್ದಾಗ ನೀಲಕಂಠನಗರದ ನಿವಾಸಿ ಸಲೀಂ ತನ್ನ ಸ್ನೇಹಿತನ ಜೊತೆ ಬಂದು ಕುಡಿಯಲು ಹಣ ಕೊಡುವಂತೆ ರಫೀಕ್ ಗೆ ಕೇಳಿದ್ದಾನೆ.
ಹಣ ಕೊಡಲು ರಫೀಕ್ ನಿರಾಕರಿಸಿದ್ದಾರೆ.ಈ ವೇಳೆ ಸಲೀಂ ಹಾಗೂ ಸ್ನೇಹಿತ ಬಿಯರ್ ಬಾಟೆಲ್ ನಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡು ಬಿದ್ದಿದ್ದ ರಫೀಕ್ ರನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ ರಫೀಕ್ ಮೃತಪಟ್ಟಿದ್ದಾರೆ. ಈ ಬಗ್ಗೆ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ