ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಮ್ಮನ ನಡುವೆ ಗಲಾಟೆಯಾಗಿರುವ ಘಟನೆ, ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಹಲ್ಯ ಗ್ರಾಮದಲ್ಲಿ ನಡೆದಿದೆ. ಗಲಾಟೆಯಾದ ಕಾರಣ ತಮ್ಮನನ್ನು ಮನೆಯಿಂದ ಹೊರ ಹಾಕಿದ್ದಕ್ಕೆ, ಮನನೊಂದ ತಮ್ಮ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮೃತ ದುರ್ದೈವಿಯನ್ನು ಸಿದ್ದರಾಜು (32) ಎನ್ನಲಾಗಿದೆ.
ವಿದ್ಯುತ್ ಬಿಲ್ ಪಾವತಿಸಿ ಬಂದಿದ್ದ ಸಿದ್ದರಾಜು, ಅಣ್ಣನ ಬಳಿ 200 ರೂ. ಕೇಳಿದ್ದ. ಈ ನಡುವೆ ಇಬ್ಬರ ನಡುವೆ ಪರಸ್ಪರವಾಗಿ ಜಗಳ ನಡೆದು, ಹೊರ ಬಂದ ತಮ್ಮ ಗ್ರಾಮದ ಹೊರ ವಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು