ಕರ್ನಾಟಕ

ಮೈಕ್ರೋ ಫೈನಾನ್ಸ್‌ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಮಂಡ್ಯ ಜಿಲ್ಲಾಡಳಿತ..!

ಮೈಕ್ರೋ ಫೈನಾನ್ಸ್‌ ಹಾವಳಿಗೆ ಕಡಿವಾಣ ಆಗಲು ಕೊನೆಗೂ ಮಂಡ್ಯ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಮೈಕ್ರೋ ಫೈನಾನ್ಸ್‌ ಹಾವಳಿಗೆ ಕಡಿವಾಣ ಆಗಲು ಕೊನೆಗೂ ಮಂಡ್ಯ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದ ಕಾರಣ, ಫೈನಾನ್ಸ್‌ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪೊಲೀಸ್‌ ಅಧಿಕಾರಿಗಳ ಜೊತೆ ಡಿಸಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಜಿಲ್ಲೆಯಲ್ಲಿರುವ 18 ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಮುಖ್ಯಸ್ಥರು ಭಾಗಿಯಾಗಿದ್ದರು. ಯಾರಿಗೂ ತೊಂದರೆ ಕೊಡಬಾರದು ಎಂದು ಡಿಸಿ ವಾರ್ನಿಂಗ್‌ ಕೂಡ ಮಾಡಿದ್ದಾರೆ.

RBI ನಿಯಮ ಮೀರಬಾರದು. ಬಲವಂತವಾಗಿ, ಕಾನೂನುಬಾಹಿರವಾಗಿ ಬಾಕಿ ವಸೂಲಿ ಮಾಡಬೇಡಿ. ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಅವಮಾನಕರ ಮಾತುಗಳನ್ನ ಆಡಬಾರದು ಎಂಬ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಕಂಟ್ರೋಲ್ ರೂಂಗೆ ಬರುವ ಎಲ್ಲಾ ಕರೆಗಳ ಮೇಲೆ ನಿಗಾ ಇಡಬೇಕು. ಕಂಟ್ರೋಲ್ ರೂಂ ನಂಬರ್ 08232-224655 ದಿನದ 24 ಗಂಟೆಯೂ ಕಾರ್ಯ ನಿರ್ವಹಣೆ ಮಾಡಬೇಕು. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದ್ರೆ ಸಹಾಯವಾಣಿಗೆ ಕರೆ ಮಾಡುವಂತೆ ಸಲಹೆ ನೀಡಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳ ಸಂಬಂಧ ಓರ್ವ ನೋಡಲ್ ಆಫೀಸರ್ ನೇಮಕ ಮಾಡಬೇಕು. ಪೊಲೀಸರಿಗೂ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ದೂರು ಬಂದ ನಂತರ FIR ದಾಖಲಿಸಬೇಕು.FIR ದಾಖಲಾಗ್ತಿದ್ದಂತೆ ಕಾನೂನುಕ್ರಮ ಕೈಗೊಳ್ಳಬೇಕು ಎಂದೆಲ್ಲ, ಜಿಲ್ಲೆಯ ಎಲ್ಲಾ ಉಪ ವಿಭಾಗದ ಡಿವೈಎಸ್ಪಿಗಳಿಗೆ ಡಿಸಿ ಡಾ.ಕುಮಾರ್ ಸೂಚನೆ ನೀಡಿದ್ದಾರೆ.