ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಮಹೇಶ್ ಜೋಶಿ ವಿರುದ್ಧ, ಮಂಡ್ಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮ್ಮೇಳನ ಮುಗಿಯುವ ಮುನ್ನವೇ ಸ್ಥಳದಿಂದ ಹೊರ ನಡೆದಿರುವ ಆರೋಪ ಹಾಗೂ ಮಂಡ್ಯ ನಾಗರಿಕರ ಗೌರವವನ್ನೂ ತಿರಸ್ಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಕೃತಜ್ಞತಾ ಸಭೆ, ಔತಣಕೂಟಕ್ಕೂ ಗೈರಾಗಿ ಮಂಡ್ಯ ಜನರ ಮೇಲಿನ ಸಿಟ್ಟು ಪ್ರದರ್ಶನ ತೋರಿದ್ದಾರೆ ಎನ್ನಲಾಗಿದ್ದು, ಮಹೇಶ್ ಜೋಶಿ ಅವರ ವಿರುದ್ಧ ಮಂಡ್ಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಮಂಡ್ಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಸಾಪ ವತಿಯಿಂದ ನಡೆದ ಕೃತಜ್ಞತಾ ಸಭೆ, ಔತಣಕೂಟದಲ್ಲಿ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನಿಂದ ಗೌರವ ಸಮರ್ಪಣೆ ಮಾಡಲಾಯಿತು. ಇದಕ್ಕೆ ಸ್ಪಂದಿಸದೇ ಮಹೇಶ್ ಜೋಶಿ ಅವರು ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಮಂಡ್ಯ ಜನಕ್ಕೆ ಸೌಜನ್ಯಕ್ಕೂ ಕೃತಜ್ಞತೆ ಸಲ್ಲಿಸಿಲ್ಲ ಎಂದು ಆಕ್ರೋಶ ವ್ಯಕ್ತವಾಗುತ್ತಿದ್ದು, ಮಹೇಶ್ ಜೋಶಿ ಅವರು ಕೂಡಲೇ ಬಂದು ಮಂಡ್ಯ ಜನರ ಬಳಿ ಕ್ಷಮೆ ಕೋರಬೇಕು ಎನ್ನುತ್ತಿದ್ದಾರೆ.