ಮಂಡ್ಯ - ನಮ್ಮ ವಿವಿ - ನಮ್ಮ ಹೆಮ್ಮೆ. ಹೌದು , ಮಂಡ್ಯ ವಿಶ್ವವಿದ್ಯಾಲಯದ ಅಸ್ತಿತ್ವಕ್ಕೆ ಈಗ ಕುತ್ತು ಬಿದ್ದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮಂಡ್ಯ ವಿವಿಗೆ ಬೀಗ ಜಡಿಯಲು ಮುಂದಾಗಿದೆ. ಆರ್ಥಿಕ ಸವಾಲು ಸೇರಿದಂತೆ ಹಲವು ಸಮಸ್ಯೆಗಳನ್ನ ಆಧರಿಸಿ ಮೈಸೂರು ವಿಶ್ವವಿದ್ಯಾಲಯದೊಂದಿಗೆ ವಿಲೀನಕ್ಕೆ ನಿರ್ಧಾರ ಮಾಡಲಾಗಿದೆ. ಇನ್ನೂ ಹಣದ ಕೊರತೆ ಸೇರಿ ಹಲವು ಸಮಸ್ಯೆ ನೆಪವೊಡ್ಡಿ ವಿವಿ ವಿಲೀನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ ಎಂದು ರಾಜ್ಯ ಸರ್ಕಾರದ ನಡೆಗೆ ಮಂಡ್ಯದಲ್ಲಿ ಜನ ಆಕ್ರೋಶ ಹೊರಹಾಕುತ್ತಿದ್ದಾರೆ.
ಮತ್ತೊಂದೆಡೆ ಸಾಹಿತಿಗಳು, ಜನಪ್ರತಿನಿಧಿಗಳಿಂದಲೂ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಐದು ವರ್ಷದ ಹಿಂದೆಯಷ್ಟೇ ವಿವಿಯಾಗಿ ಮೇಲ್ದರ್ಗೇರಿದ್ದ ಸರ್ಕಾರಿ ಸ್ವಯತ್ತ ಕಾಲೇಜು ಇದಾಗಿದೆ. ಸದ್ಯ ಮಂಡ್ಯ ಜಿಲ್ಲೆಯ 47 ಕಾಲೇಜುಗಳನ್ನ ಮಂಡ್ಯ ವಿವಿಗೆ ಸೇರ್ಪಡೆ ಮಾಡಲಾಗಿತು. ಇನ್ನೂ ಉನ್ನತ ಶಿಕ್ಷಣ ಅಭಿವೃದ್ದಿ ಪಡಿಸುವ ದೃಷ್ಟಿಯಿಂದ ವಿವಿ ಸ್ಥಾಪನೆ ಮಾಡಲಾಗಿತು. ಇದೀಗ ಬಿಜೆಪಿ ಸರ್ಕಾರದ ಕೊಡುಗೆಯನ್ನ ಕಸಿಯಲು ಕೈ ಸರ್ಕಾರ ಪ್ಲಾನ್ ಮಾಡಿದೆ ಎಂಬ ಆರೋಪವೂ ಇದೆ.
ವಿವಿ ಸ್ಥಾಪನೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು .ಈಗ ಮತ್ತೆ ಮೈಸೂರು ವಿವಿಗೆ ವಿಲೀನವಾದ್ರೆ ದಾಖಲೆಗಳಿಗಾಗಿ ಮೈಸೂರಿಗೆ ಅಲೆಯಬೇಕಾದ ಪರಿಸ್ಥಿತಿ ಲೆಕ್ಕಚಾರ ಮಾಡಿಕೊಂಡು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ವಿಶ್ವವಿದ್ಯಾನಿಲಯ ಘನತೆಯನ್ನ ಕಿತ್ತುಕೊಳ್ಳುತ್ತಿರೋದಕ್ಕೆ ವಿರೋಧ ವ್ಯಕ್ತಪಡಿಸಿದ್ಧಾರೆ. ಸರ್ಕಾರದ ವಿರುದ್ದ ಹೋರಾಟಕ್ಕೆ ವಿವಿಧ ಸಂಘಟನೆಗಳು ನಿರ್ಧಾರ ಮಾಡಿದೆ. ಇನ್ನೂ ಮಂಡ್ಯ ವಿವಿ ಮುಚ್ಚುವ ನಿರ್ಧಾರ ಬದಲಿಸದಿದ್ದರೇ ಬೃಹತ್ ಹೋರಾಟದ ಎಚ್ಚರಿಕೆಯೂ ನೀಡಲಾಗಿದೆ.